ಕನ್ಯಾಡಿ ಬಳಿ ಒಮ್ನಿ ಮತ್ತು ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಒಮ್ನಿ ಸವಾರನಿಗೆ ಗಂಭೀರ ಗಾಯ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಧರ್ಮಸ್ಥಳ: ಇಲ್ಲಿಯ ಕನ್ಯಾಡಿ ಬಳಿ ಮಾರುತಿ ಒಮ್ನಿ ಕಾರು ಮತ್ತು ಕೆಎಸ್‌ಆರ್‌ಟಿಸಿ ಬಸ್ ನಡುವೆ ಅಪಘಾತ ಸಂಭವಿಸಿ ಒಮ್ನಿ ಚಾಲಕ ಗಂಭೀರ ಗಾಯಗೊಂಡ ಘಟನೆ ಜ.4 ರಂದು ಬೆಳಿಗ್ಗೆ ನಡೆದಿದೆ.
ಘಟನೆಯಿಂದ ಒಮ್ನಿ ಗಾಡಿ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು, ಒಮ್ನಿ ಸವಾರ ರೆಂಕೆದಗುತ್ತು ನಿವಾಸಿ ಕೆ.ಸಿ ಕ್ಯಾಟರರ್‍ಸ್ ಮಾಲಕ ದೇವರಾಜ್ ಪೂಜಾರಿ ಯವರಿಗೆ ಗಂಭೀರ ಗಾಯಗಳಾಗಿದೆ. ಚಿಕಿತ್ಸೆಗಾಗಿ ಅವರನ್ನು ಉಜಿರೆಯ ಬೆನಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ದೇವರಾಜ್ ಪೂಜಾರಿಯವರು ತಮ್ಮ ರೆಂಕೆದಗುತ್ತು ಮನೆಯಿಂದ  ಧರ್ಮಸ್ಥಳದ ಕಡೆಗೆ ಒಮ್ನಿಯಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.   ಈ ಸಂಬಂಧ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.