ಬಂದಾರು:ಬಂದಾರು,ಮೈರೋಳ್ತಡ್ಕ
ಶ್ರೀ ಧರ್ಮಸ್ಥಳ ಸೇವಾ ವಿಪತ್ತು ನಿರ್ವಹಣ ಘಟಕ ಕಣಿಯೂರು ವಲಯದಿಂದ
ಕಣಿಯೂರು ವಿಪತ್ತು ನಿರ್ವಹಣ ಘಟಕದ ಸದಸ್ಯರಾದ ಶ್ರೀಯುತ ದಿನೇಶ್ ಗೌಡ ಖಂಡಿಗ ಇವರು ಗ್ರಾಮ ಪಂಚಾಯತ್ ಚುನಾವಣೆಗೆ ಮೈರೋಳ್ತಡ್ಕ-2 ವಾರ್ಡ್ ನಿಂದ ಸ್ಪರ್ಧಿಸಿ ಬಹುಮತ ಅಂತರಗಳಿಂದ ಜಯಗಳಿಸಿ ಎರಡನೇ ಬಾರಿಗೆ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿರುವ ಇವರನ್ನು ಕಣಿಯೂರು ವಿಪತ್ತು ನಿರ್ವಹಣ ಘಟಕದಿಂದ ಅಭಿನಂದಿಸಲಾಯಿತು.
ಈ ಕಾರ್ಯಕ್ರಮಗಳಲ್ಲಿ ವಿಪತ್ತು ನಿರ್ವಹಣ ಘಟಕದ ಸಂಯೋಜಕರಾಗಿ ಶ್ರೀಮತಿ ಚಂದ್ರಕಲಾ ಮೊಗ್ರು,ಸ್ವಯಂಸೇವಕರಾದ ಅಶೋಕ ಇಳಂತಿಲ,ಗಿರೀಧರ ಇಳಂತಿಲ,ಸುಂದರ ಕಣಿಯೂರು,ವಿನಯಚಂದ್ರ ಮೊಗ್ರು,ಬಂದಾರು ಸೇವಾಪ್ರತಿನಿಧಿ ನಿರಂಜನ್ ಗೌಡ,
ಬೂತ್ ಸಮಿತಿ ಅಧ್ಯಕ್ಷರಾದ ಪ್ರಶಾಂತ್ ಗೌಡ ನಿರುಂಬುಡ,ಬೂತ್ ಯುವಮೋರ್ಚಾ ಸಂಚಾಲಕರಾದ ಗಿರೀಶ್ ಗೌಡ ಬಿ.ಕೆ ಚಿರಾಮೃತ,ಕುಂಬುಡಂಗೆ ಇವರು ಉಪಸ್ಥಿತರಿದ್ದು ಶುಭಹಾರೈಸಿದರು.