ಅಳದಂಗಡಿ: ಭೀಕರ ರಸ್ತೆ ಅಪಘಾತ, ಪ್ರಯಾಣಿಕ ಭುಜಬಲಿ ದಾರುಣ ಸಾವು, ಹಲವರಿಗೆ ಗಂಭೀರ ಗಾಯ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಅಳದಂಗಡಿ: ಇಲ್ಲಿನ ಕೆದ್ದು ತಿರುವು ರಸ್ತೆಯಲ್ಲಿ ನಡೆದ ಒಮ್ನಿ ಕಾರು ಮತ್ತು ಆಟೋ ರಿಕ್ಷಾ ನಡುವೆ ಸಂಭವಿಸಿದ ಬೀಕರ ರಸ್ತೆ ಅಪಘಾತದಲ್ಲಿ ಪಿಲ್ಯ ನಡಿಮಾರು ನಿವಾಸಿ, ಅಳದಂಗಡಿ ಗೋ ಆಸ್ಪತ್ರೆಯ ನಿವೃತ ಉದ್ಯೋಗಿ ಭುಜಬಲಿ (61) ಅವರು ದಾರುಣವಾಗಿ ಮೃತಪಟ್ಟಿದ್ದಾರೆ.
ಭಜಬಲಿ ಅವರು ಅಳದಂಗಡಿಯ ರಿಕ್ಷಾ ಚಾಲಕ ಶಶಿಧರರವರೊಂದಿಗೆ ತನ್ನ ಪತ್ನಿ ಲಲಿತಾ ಮತ್ತು ಮಗ ಅಭಿಜತ್ ಅವರೊಂದಿಗೆ ಬದ್ಯಾರು ಆಸ್ಪತ್ರೆಗೆ ಬರುತ್ತಿದ್ದು ಎದುರಿನಿಂದ ಶಿವಮೊಗ್ಗ ಕಡೆಗೆ ಹೋಗುತ್ತಿದ್ದ ಒಮ್ಮಿ ಕಾರು ಮುಖಮುಖಿ ಡಿಕ್ಕಿ ಹೊಡೆಯಿತು.
ಡಿಕ್ಕಿ ಹೊಡೆದ ರಭಸಕ್ಕೆ ರಿಕ್ಷಾ ಹಾಗೂ ಕಾರು ರಸ್ತೆಯಿಂದ ಎಳೆಯಲ್ಪಟ್ಟು ಇಳಿಜಾರುವಿಗೆ ಬಿದ್ದು ಸಂಪೂರ್ಣ ಜಖಂಗೊಂಡಿದೆ.
ಆಟೋದಲ್ಲಿದ್ದ ಭುಜಬಲಿ, ಲಲಿತಾ , ಅಭಿಜಿತ್, ಓಮ್ನಿಯಲ್ಲಿದ್ದ ಶಿವಮೊಗ್ಗದ ಉಷಾ, ಚಾಲಕ ನಾಗಭೂಷಣ್ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ, ಆದರೆ ಭುಜಬಲಿ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು, ಲಲಿತಾ ಅವರ ಸ್ಥಿತಿ ಕೂಡ ಗಂಭೀರವಾಗಿದೆ ಎಂದು ತಿಳಿದು ಬಂದಿದ್ದು, ವೇಣೂರು ಪೋಲಿಸರು ಸ್ಥಳಕ್ಕೆ ಆಗಮಿಸಿ ಕ್ರಮ ಕೈಗೊಂಡಿದ್ದಾರೆ.
ಗಾಯಳುಗಳನ್ನು ಬಳಂಜದ ಸಾ್ದಿಕ್ ಅವರ ಇನೋವಾ ಕಾರಿನಲ್ಲಿ ಬಳಂಜದ ಅಂಬ್ಯುಲೆನ್ಸ್ ಚಾಲಕರಾದ ಪದ್ಮನಾಭ ಕುಲಾಲ್, ಹನೀಫ್ ಮಂಗಳೂರಿನ ಆಸ್ಪತ್ರೆಗೆ ತಲುಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.