ಬೆಳ್ತಂಗಡಿ ತಾಲೂಕು ಪತ್ರಕರ್ತ ಸಂಘದ ಅಧ್ಯಕ್ಷರಾಗಿ ಅಚುಶ್ರೀ ಬಾಂಗೇರು, ಕಾರ್ಯದರ್ಶಿಯಾಗಿ ಜಾರಪ್ಪ ಪೂಜಾರಿ ಬೆಳಾಲು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮಹಾಸಭೆ ಜ.2ರಂದು ಬೆಳ್ತಂಗಡಿ ಪತ್ರಕರ್ತರ ಭವನಾದಲ್ಲಿ ಜರುಗಿತು. ನೂತನ ಅಧ್ಯಕ್ಷರಾಗಿ ವಿಜಯ ಕರ್ನಾಟಕ ಪತ್ರಿಕೆಯ ವರದಿಗಾರ ಅಚುಶ್ರೀ ಬಾಂಗೇರು, ಕಾರ್ಯದರ್ಶಿಯಾಗಿ ಸುದ್ದಿ ಬಿಡುಗಡೆ ಪತ್ರಿಕೆಯ ವರದಿಗಾರ ಜಾರಪ್ಪ ಪೂಜಾರಿ ಬೆಳಾಲು ಮತ್ತು ಕೋಶಾಧಿಕಾರಿಯಾಗಿ ಪ್ರಸಾದ್ ಶೆಟ್ಟಿ ಏಣಿಂಜೆ ಆಯ್ಕೆಯಾಗಿದ್ದಾರೆ.
ಇತರ ಪದಾಧಿಕಾರಿಗಳಾಗಿ, ಉಪಾಧ್ಯಕ್ಷರಾಗಿ ಉದಯವಾಣಿ ವೇಣೂರು ವಲಯ ವರದಿಗಾರ ಪದ್ಮಾನಾಭ, ಜೊತೆಕಾರ್ಯದರ್ಶಿಯಾಗಿ ಸಂಜೀವ ಎನ್.ಸಿ ಆಯ್ಕೆಯಾದರು. ಸಮಾರಂಭದ ಅಧ್ಯಕ್ಷತೆಯನ್ನು ಪತ್ರಕರ್ತರ ಸಂಘದ ಅಧ್ಯಕ್ಷ ಅಶ್ರಫ್ ಆಲಿಕುಂಞ ವಹಿಸಿದ್ದರು. ಚುನಾವಣಾ ಅಧಕಾರಿಯಾಗಿ ಹಿರಿಯ ಪತ್ರಕರ್ತರ ಆರ್ ಎನ್ ಪೂವಾಣಿ ಆಯ್ಕೆ ಪ್ರಕ್ರಿಯೆ ನಡೆಸಿದ್ದರು. ಗ್ರಾಮೀಣ ಕಾರ್ಯದರ್ಶಿ ಭುವನೇಶ್ ಜಿ. ಸಂಘದ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು. ಕಾರ್ಯದರ್ಶಿ ಮನೋಹರ ಬಳಂಜ, ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.