ಮಿತ್ತಬಾಗಿಲು ಗ್ರಾಮ ಪಂಚಾಯತ್ಗೆ ನಡೆದ 10 ಸ್ಥಾನಗಳಲ್ಲಿ 7 ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಕ್ಷ ಬೆಂಬಲಿತ ಅಭ್ಯರ್ಥಿಗಳು ಜಯಶಾಲಿಯಾಗಿದ್ದಾರೆ. ಕಾಂಗ್ರೆಸ್ ಬೆಂಬಲಿತರಾಗಿ ಇಬ್ಬರು ಮತ್ತು ಎಸ್.ಡಿ.ಪಿ.ಐ ಅಭ್ಯರ್ಥಿಯೊಬ್ಬರು ಜಯ ಸಾಧಿಸಿದ್ದಾರೆ.
ಮಿತ್ತಬಾಗಿಲು 1ನೇ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತರಾದ ಚಂದ್ರಶೇಖರ (384), ಬಿಜೆಪಿ ಬೆಂಬಲಿತರಾದ ಚೇತನಾ (312) ಮತಗಳನ್ನು ಪಡೆದು ಚುನಾಯಿತರಾಗಿದ್ದಾರೆ. ಎಸ್ಡಿಪಿಐಯಿಂದ ಅಹಮ್ಮದ್ ಕಬೀರ್(418) ಜಯಶಾಲಿಯಾಗಿದ್ದಾರೆ. ಆನಂದ ಗೌಡ (345), ಗೋಪಿ (289), ನಾರಾಯಣ ಪಾಟಾಳಿ (388) ಪರಾಭವಗೊಂಡಿದ್ದಾರೆ. ಮಿತ್ತಬಾಗಿಲು 2ನೇ ಕ್ಷೇತ್ರದಿಂದ ಬಿಜೆಪಿ ಬೆಂಬಲಿತರಾದ ಮೋಹಿನಿ (410), ರಾಮಣ್ಣ ಕುಂಬಾರ(431), ಲತಾ (421) ಚುನಾಯಿತರಾಗಿದ್ದಾರೆ. ಕೃಷ್ಣಪ್ಪ ಪೂಜಾರಿ (240) ಶಶಿಕಲಾ (233) ಪರಾಭವ ಗೊಂಡಿದ್ದಾರೆ. ಮಿತ್ತಬಾಗಿಲು 3ನೇ ಕ್ಷೇತ್ರದಿಂದ ಬಿಜೆಪಿ ಬೆಂಬಲತರಾದ ವಿಜಯ ಕೆ (429) ವಿನಯಚಂದ್ರ (553) ಕಾಂಗ್ರೇಸ್ ಬೆಂಬಲಿತರಾದ ಶಾಹುಲ್ ಹಮಿದ್ (531) ಚುನಾಯಿತರಾಗಿದ್ದಾರೆ. ಈ ಕ್ಷೇತ್ರದಿಂದಬಿಜೆಪಿ ಬೆಂಬಲಿತರಾದ ಶಾಂಭವಿ ಅವಿರೋಧವಾಗಿಆಯ್ಕೆಯಾಗಿದ್ದಾರೆ. ಸುರೇಂದ್ರ (386) ಹರಿಣಿ (301), ಸುರೇಶ್ (420) ಪರಾಭವಗೊಂಡಿದ್ದಾರೆ.