ಕೊಕ್ಕಡ: ಕೊಕ್ಕಡ ಗ್ರಾಮ ಪಂಚಾಯತ್ನಲ್ಲಿ 13 ಸ್ಥಾನಕ್ಕೆ ನಡೆದ ಚುನಾವಣೆಯಲಿ 13 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ವಾರ್ಡ್1ರಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಶರತ್ ಕುಮಾರ್ 622, ವನಜಾಕ್ಷಿ 630, ವಿಶ್ವನಾಥ ಮಲೆಕುಡಿಯ673 ಮತಗಳನ್ನು ಪಡೆದು ವಿಜಯಶಾಲಿಯಾಗಿದ್ದಾರೆ. ಕಮ್ಯೂನಿಸ್ಟ್ ಬೆಂಬಲಿತರಾದ ಅಣ್ಣು 144, ಬಾಬು 232, ಶಬನಾ 219, ಎಸ್.ಡಿಪಿಐ ಬೆಂಬಲಿತ ಅಭ್ಯರ್ಥಿಗಳಾಗಿ ಇಸ್ಮಾಯಿಲ್ ಅನ್ಸಾರಿ 131 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.
ಕ್ಷೇತ್ರ 2 ರಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಜಗದೀಶ್ ಪೂಜಾರಿ 475, ಪ್ರಮೀಳಾ ಜಿ439, ಯೋಗೀಶ ಆಲಂಬಿಲ 478ಮತವನ್ನು ಪಡೆದು ಜಯಶಾಲಿಯಾಗಿದ್ದಾರೆ. ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿಗಳಾಗಿ ಕಲ್ಯಾಣಿ 168, ಫಾರೂಕ್ 243, ಯತೀಶ್ ಟಿ.ಎಮ್ 195 ಮತವನ್ನು ಪಡೆದು ಪರಾಭವಗೊಂಡಿದ್ದಾರೆ.
ಕ್ಷೇತ್ರ 3ರಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಬೇಬಿ 405, ಪವಿತ್ರ ಕೆ 413, ಪ್ರಭಾಕರ ಗೌಡ 432, ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ಜಾನಕಿ 234, ಎಸ್.ಕೆ ಹಕೀಂ 247, ಪಕ್ಷೇತರರಾಗಿ ಇ ಕೆ ಇಬ್ರಾಹಿಂ199, ಎಮ್ ಪ್ರೇಮಾ335, ಸೀತಾ ಸುಭಾಶ್ ರಾಜ್ 110 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ. ಕ್ಷೇತ್ರ 4ರಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ಪುರುಷೋತ್ತಮ 416, ಲತಾ ಕೃಷ್ಣಪ್ಪ ಗೌಡ 432, ವನಿತಾ ಯೋಗೀಶ್ ಗೌಡ 441, ಜಾನಕಿ 438ಮತಗಳೊಂದಿಗೆ ಜಯಸಾಧಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ಲಲಿತಾ311, ಶಶಿಕಲಾ 343, ಸಿನಿ ಗುರುದೇವನ್ 336, ವಿಜೆ ಸೆಬಾಸ್ಟಿನ್ ಯಾನೆ ಸಣ್ಣಿ 357, ಸ್ವಾಭಿಮಾನಿ ಬಳಗದಿಂದ ಎಸ್ ಕೆ. ಉಷಾ108, ಸೀತಾಮ್ಮ ಕೆ105, ಪಕ್ಷೇತರ ದಯಾನೀಶ್ 153, ಟಿಜೆ ರೀನಾ 113 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.