ಅರಸಿನಮಕ್ಕಿ ಗ್ರಾಮ ಪಂಚಾಯತ್: 13 ಸ್ಥಾನಗಳಲ್ಲೂ ಬಿಜೆಪಿ ಕ್ಲೀನ್ ಸ್ವೀಪ್

ಅರಸಿನಮಕ್ಕಿ : ಹತ್ಯಡ್ಕ ಮತ್ತು ರೆಖ್ಯ ಗ್ರಾಮ ವ್ಯಾಪ್ತಿಯನ್ನು ಒಳಗೊಂಡ ಅರಸಿನಮಕ್ಕಿ ಗ್ರಾಮ ಪಂಚಾಯತದ 13 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 13 ಸ್ಥಾನಗಳನ್ನು ಗೆಲ್ಲುವುದರೊಂದಿಗೆ ಬಿಜೆಪಿ ಬೆಂಬಲಿತರು ಜಯಭೇರಿ ಬಾರಿಸಿದ್ದಾರೆ. ಇವರಿಗೆ ತೀವ್ರ ಪ್ರತಿಸ್ಪರ್ಧೆ ನೀಡಿದ್ದ ಜಗನ್ನಾಥ ಗೌಡ ಅಭಿಮಾನಿ ಬಳಗ ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಯಾವುದೇ ಕ್ಷೇತ್ರದಲ್ಲಿ ಗೆಲುವು ಪಡೆಯಲು ಸಾಧ್ಯವಾಗಿಲ್ಲ.
ಹತ್ಯಡ್ಕ-1 ಕ್ಷೇತ್ರ ದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ಸುಧೀರ್ ಕುಮಾರ್ ಎಮ್.ಎಸ್ 627, ಶಕುಂತಲಾ 604, ಲಾವಣ್ಯ 620, ಸುಮಿತ್ರಾ 568 ಮತಗಳನ್ನು ಪಡೆದು ಗೆಲುವು ಪಡೆದಿದ್ದಾರೆ. ಜಗನ್ನಾಥ ಗೌಡ ಅಭಿಮಾನಿ ಬಳಗ ದಿಂದ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಧರ್ಮರಾಜ ಗೌಡ ಅಡ್ಕಾಡಿ 620, ಜಾನಕಿ 493, ಪೂರ್ಣಿಮಾ 551, ಸೌಮ್ಯ 531 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ.
ಹತ್ಯಡ್ಕ ಕ್ಷೇತ್ರ 2ರಲ್ಲಿ ಬಿಜೆಪಿ ಬೆಂಬಲಿತ ಪುಷ್ಪಾ 414, ಪ್ರೇಮಚಂದ್ರ 472, ಸೌಮ್ಯ 442 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಜಗನ್ನಾಥ ಗೌಡ ಅಭಿಮಾನಿ ಬಳಗದಿಂದ ರಾಜರಾಮ ಟಿ 326, ರಾಜಶ್ರೀ ಹೆಬ್ಬಾರ್ 313, ಗ್ರಾ.ಪಂ ಮಾಜಿ ಸದಸ್ಯೆ ಸರೋಜಿನಿ 304 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ.
ರೆಖ್ಯಾ ಕ್ಷೇತ್ರ 1ರಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಚೇತನ್ ಕೆ 505, ಕೆ.ಎನ್ ನವೀನ್ 514, ವಿಶಾಲಾಕ್ಷಿ ಕೆ 484 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಜಯಂತ 242, ಮಲ್ಲಿಕಾ 261, ಸೀತಾರಾಮ281 ಮತಗಳನ್ನು ಪಡೆದು ಸೋಲು ಅನುಭವಿಸಿದ್ದಾರೆ.
ರೆಖ್ಯಾ ಕ್ಷೇತ್ರ 2ರಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಗಾಯತ್ರಿ 355, ಜನಾರ್ದನ ಡಿ 385, ನಾಗೇಶ್ ಆರ್ 402 ಗೆಲುವು ಸಾಧಿಸಿದ್ದಾರೆ. ಕುಸುಮ 155, ಲಕ್ಷ್ಮಣ 104, ಸತೀಶ್ ಐ 48, ಪಕ್ಷೇತರರಾದ ವಿಕ್ರಮಾದಿತ್ಯ 238, ವಿಜಯ ಕುಮಾರ್ 56 , ಶ್ರೀಧರ 35 ಸೋಲು ಅನುಭವಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.