ಇಂದಬೆಟ್ಟು: ಇಂದಬೆಟ್ಟು ಗ್ರಾಮ ಪಂಚಾಯತ್ನಲ್ಲಿ 11ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 10 ಬಿಜೆಪಿ 1ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಿದ್ದಾರೆ.
ಕ್ಷೇತ್ರ1 ರಲ್ಲಿ ಬಿಜೆಪಿ ಬೆಂಬಲಿತ ಶ್ರೀಮತಿ ಸೌಮ್ಯ 314, ಶ್ರೀಮತಿ ಪ್ರೇಮ ಕುತ್ರಬೆಟ್ಟು 379, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ವೀರಪ್ಪ ಮೊಲಿ414, ಮತವನ್ನು ಪಡೆದು ಜಯಗಳಿಸಿದ್ದಾರೆ. ಕೇಶವ ಎಮ್.ಎಸ್. 389, ಗೀತಾ ಕೆ. 295, ವಿನೋದ312, ಎಸ್ಡಿಪಿಐ ಬೆಂಬಲಿತ ಹುಸ್ಮಾನ್ ಯಾನೆ ಇಲ್ಯಾಸ್229 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.
ಕ್ಷೇತ್ರ 2ರಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಪ್ರಮೋದ್ 316, ಬಿ.ಸತೀಶ್ 281, ಶ್ರೀಮತಿ ಹರಿಣಾಕ್ಷಿ 319 ಮತಗಳನ್ನು ಪಡೆದು ವಿಜಯಶಾಲಿಯಾಗಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಇಸ್ಮಾಯಿಲ್ ಬಂಗಾಡಿ234, ಎಲಿಯಾ ಬಂಗಾಡಿ 238, ಕೆ ಜಯರಾಮ್ ಬಂಗಾಡಿ 189, ಎಸ್ಡಿಪಿಐ ಬೆಂಬಲಿತರಾದ ಆಯಿನಾ108, ಆಂಟನಿ ಪಿ.ಡಿ 168, ಶರೀಫ್ 155 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.
ಕ್ಷೇತ್ರ 3ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಶ್ರೀಮತಿ ಆಶಾಲತಾ ಸುರೇಂದ್ರ ಗುಡಿಗಾರ 356, ಶ್ರೀಕಾಂತ ಸೋಮಯ್ಯ ದಡ್ಡು 388, ಸುಮಿತ್ರಾ 305 ಮತವನ್ನು ಪಡೆದು ವಿಜಯಿಶಾಲಿಯಾಗಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಆಶಾ ಗಣೇಶ್ ಗೌಡ163, ಜೋಹರಾ ಹಕೀಂ228, ರವಿ ನೇತ್ರಾವತಿ ನಗರ251, ಎಸ್ಡಿಪಿಐ ಬೆಂಬಲಿತ ಅಹಮ್ಮದ್ 69, ಪಕ್ಷೇತರರಾಗಿ ರಾಜೇಂದ್ರ99 ಮತಗಳನ್ನು ಪರಾಭವಗೊಂಡಿದ್ದಾರೆ.
ಕ್ಷೇತ್ರ 4ರಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ಆನಂದ ಅಡೀಲು 394, ಜಯಂತಿ ನಾಗೇಶ್406 ಮತವನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ನಿರ್ಮಲ 210, ಪ್ರಕಾಶ್ ಕುಮಾರ್ ಪರಾರಿ 254, ಮತವನ್ನು ಪಡೆದು ಪರಾಭವಗೊಂಡಿದ್ದಾರೆ.