ಮಚ್ಚಿನ : ಮಚ್ಚಿನ ಗ್ರಾಮ ಪಂಚಾಯತದ 14 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು 14 ಸ್ಥಾನಗಳಲ್ಲೂ ಜಯಭೇರಿ ಭಾರಿಸುವುದರೊಂದಿಗೆ ಪಂಚಾಯತದ ಆಡಳಿತವನ್ನು ತನ್ನ ವಶಕ್ಕೆ ಪಡೆದುಕೊಂಡಿದೆ. ಈ ಪಂಚಾಯತದಲ್ಲಿ ಕಾಂಗ್ರೆಸ್ ಬೆಂಬಲಿತರು ಯಾವುದೇ ಸ್ಥಾನವನ್ನು ಪಡೆಯಲು ಯಶಸ್ವಿಯಾಗಲಿಲ್ಲ.
1ನೇ ವಾರ್ಡ್ನಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಗ್ರಾ.ಪಂ ಮಾಜಿ ಉಪಾಧ್ಯಕ್ಷರಾದ ಚಂದ್ರಶೇಖರ್ ಬಿ. ಎಸ್, ಪ್ರತಿಭಾ ಬಿ ರೈ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ಧರ್ಣಪ್ಪ ಗೌಡ, ವನಿತಾ ಫೆರ್ನಾಂಡೀಸ್ ಪಕ್ಷೇತರರಾಗಿ, ಪ್ರಭಾಕರ ಪೂಜಾರಿ
2ನೇ ವಾರ್ಡ್ನಿಂದ ಬಿಜೆಪಿ ಬೆಂಬಲಿತ ಜಯಶ್ರೀ(425), ಗ್ರಾ.ಪಂ ಮಾಜಿ ಅಧ್ಯಕ್ಷ ಪ್ರಮೋದ್(511), ರುಕ್ಮಿಣಿ ಬಾಬು(484) ಮತಗಳನ್ನು ಪಡೆದು ಜಯಸಾಧಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತ ರುಕ್ಮಿಣಿ(175), ವಿಜಯ(141), ಹೆನ್ರಿ(168)ಮತಗಳನ್ನು ಪಡೆದು ಸೋಲು ಕಂಡಿದ್ದಾರೆ.
೩ನೇ ವಾರ್ಡ್ ಬಿಜೆಪಿ ಬೆಂಬಲಿತ ರಮ್ಯಶ್ರೀ(293), ರವಿಚಂದ್ರ(304), ವಿಶ್ವರಾಜ್ ಹೆಗ್ಡೆ (298)ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತರಾಗಿದ್ದ ಪಿ.ಕೆ ಇಸ್ಮಾಯಿಲ್( 153), ಕೆ. ಪದ್ಮನಾಭ(93), ಪ್ರೇಮ(228),ಎಸ್.ಡಿ.ಪಿ.ಐ ಅಭ್ಯರ್ಥಿ ಅಬ್ದುಲ್ ರಝಾಕ್(155), ಕಾಸಿಂ(153), ಪಕ್ಷೇತರರಾಗಿದ್ದ ಪರಮೇಶ್ವರ ಎಂ(119) ಮತ್ತು ಮಹಮ್ಮದ್ ರಿಯಾಝ್(44) ಮತಗಳನ್ನು ಪಡೆದು ಸೋಲು ಕಂಡಿದ್ದಾರೆ.
4ನೇ ವಾರ್ಡ್ ಬಿಜೆಪಿ ಬೆಂಬಲಿತರಾಗಿ ಚಂದ್ರಕಾಂತ್, ತಾರಾ ಎಂ, ಸೋಮಾವತಿ ಕಾಂಗ್ರೆಸ್ ಬೆಂಬಲಿತರಾಗಿ ಕುಸುಮಾವತಿ, ಚಂಚಲ, ಜಿ ವಿನೋದ್ ಗುಂಡಿಜಾಲು, ಎಸ್ಡಿಪಿಐ ಉಮರಬ್ಬ
ಮಚ್ಚಿನ ವಾರ್ಡ್-5ರಲ್ಲಿ ಬಿಜೆಪಿ ಬೆಂಬಲಿತರಾದ ಚೇತನ್ 431, ಡೀಕಮ್ಮ 428, ಶುಭಕರ 399 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತರಾದ ಕೇಶವ ಪೂಜಾರಿ 228, ದಾಮೋದರ್ 249, ಗ್ರಾ.ಪಂ ಮಾಜಿ ಅಧ್ಯಕ್ಷೆ ಹರ್ಷಲತಾ 184, ಪಕ್ಷೇತರರಾದ ಜಗದೀಶ್85ಮತಗಳನ್ನು ಪಡೆದು ಸೋಲು ಕಂಡಿದ್ದಾರೆ.