ಬೆಳ್ತಂಗಡಿ: ಕಳೆದ ಹಲವು ವರ್ಷಗಳಿಂದ ಬೆಳ್ತಂಗಡಿ ಸಂತೆಕಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪವರ್ ಆನ್ ಬ್ಯಾಟರಿ ಹಾಗೂ ಆಯಾನ್ಸ್ ಎಲೆಕ್ಟ್ರಾನಿಕ್ಸ್ & ಫರ್ನಿಚರ್ಸ್ ಸಂಸ್ಥೆಯ ಮತ್ತೊಂದು ಸಹಸಂಸ್ಥೆ ಪವರ್ ಆನ್ ಫ್ಯಾಮಿಲಿ ಮಾರ್ಟ್ ಇದರ ಶುಭಾರಂಭವು ಜ.1 ಹೊಸ ವರ್ಷದ ಶುಭದಿನದಂದು ಬೆಳ್ತಂಗಡಿ ಚರ್ಚ್ರೋಡ್ ವೈಭವ್ ಆರ್ಕೇಡ್ನಲ್ಲಿ ನಡೆಯಿತು.
ನೂತನ ಸಂಸ್ಥೆಯ ಉದ್ಘಾಟನೆಯನ್ನು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲರು ದೀಪ ಬೆಳಗಿಸುವುದರ ಮೂಲಕ ನೇರವೇರಿಸಿದರು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ವಿಧಾನಪರಿಷತ್ ಸದಸ್ಯ ಪ್ರತಾಪ್ಸಿಂಹ ನಾಯಕ್, ಬೆಳ್ತಂಗಡಿ ಮಾಜಿ ಶಾಸಕ ಕೆ ವಸಂತ ಬಂಗೇರ, ಬೆಳ್ತಂಗಡಿ ನಗರ ಪಂಚಾಯತ್ ಅಧ್ಯಕ್ಷೆ ರಜನಿ ಕುಡ್ವ, ಬೆಳ್ತಂಗಡಿ ಜುಮ್ಮಾ ಮಸೀದಿ ಖತೀಬರು ಮೊಹಮ್ಮದ್ ಹನೀಫ್ ಫೈಝಿ, ಹೋಲಿ ರೆಡೀಮರ್ ಆಂಗ್ಲ ಮಾಧ್ಯಮ ಶಾಲಾ ಪ್ರಾಂಶುಪಾಲ ರೆ.ಫಾ| ಜಸೊನ್ ವಿಜಯ್ ಮೋನಿಸ್, ಬೆಳ್ತಂಗಡಿ ವೈಭವ ಆರ್ಕೆಡ್ ಮಾಲಕ ಸೀತಾರಾಮ್ ಬಾಬು ಶೆಟ್ಟಿ ಹಾಗೂ ಬಂಧು ಮಿತ್ರರು ಉಪಸ್ಥಿತರಿದ್ದು ನೂತನ ಸಂಸ್ಥೆಗೆ ಶುಭ ಹಾರೈಸಿದರು.
ಸಂಸ್ಥೆಯ ಆಡಳಿತ ನಿರ್ದೇಶಕ ಶೀತಲ್ ಜೈನ್ ಬಂದಂತಹ ಅತಿಥಿ ಗಣ್ಯರನ್ನು ಸ್ವಾಗತಿಸಿ ಕೃತಜ್ಞತೆ ಸಲ್ಲಿಸಿದರು.
ಗ್ರಾಹಕರ ಪ್ರೀತಿ-ವಿಶ್ವಾಸ ಗಳಿಸಿ, ಸರ್ವೀಸ್ ಸೇವೆಯಿಂದ ಹಾಗೂ ಗುಣಮಟ್ಟದ ವಸ್ತುಗಳ ಆಯ್ಕೆಯೊಂದಿಗೆ ತಾಲೂಕಿನಲ್ಲಿ ಪವರ್ ಅನ್ ಸಂಸ್ಥೆಯು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.