ಧರ್ಮಸ್ಥಳ ಗ್ರಾಮ ಪಂಚಾಯತ್ 21 ಸ್ಥಾನಗಳಲ್ಲಿ ಜಯಭೇರಿ ಭಾರಿಸಿದ ಬಿಜೆಪಿ ಅಧಿಕಾರಕ್ಕೆ

ಧರ್ಮಸ್ಥಳ: ಧರ್ಮಸ್ಥಳ ಗ್ರಾಮ ಪಂಚಾಯತದ 25 ಸದಸ್ಯ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 21 ಸ್ಥಾನಗಳಲ್ಲಿ ಜಯಭೇರಿ ಭಾರಿಸುವುದರೊಂದಿಗೆ ಬಿಜೆಪಿ ಪಂಚಾಯತದ ಅಧಿಕಾರವನ್ನು ತನ್ನ ವಶ ಪಡೆದುಕೊಂಡಿದೆ. ಈ ಪಂಚಾಯತದಲ್ಲಿ ಪ್ರತಿ ಸ್ಪರ್ಧೆ ನೀಡಿದ್ದ ಕಾಂಗ್ರೆಸ್ ಕೇವಲ 4 ಸ್ಥಾನಗಳನ್ನಷ್ಟೇ ಪಡೆಯಲು ಶಕ್ತವಾಗಿದೆ.
ಧರ್ಮಸ್ಥಳ ವಾರ್ಡ್-1ರಲ್ಲಿ ಬಿಜೆಪಿ ಬೆಂಬಲಿತರಾದ ವಸಂತ ನಾಯ್ಕ, ಕಾಂಗ್ರೆಸ್ ಬೆಂಬಲಿತರಾದ ಮಾಜಿ ಸದಸ್ಯ ಹರೀಶ್ ಸುವರ್ಣ, ಭಾರತಿ ಅಧಿಕ ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಡಿ. ಕೃಷ್ಣ , ರಾಮಣ್ಣ ನಾಯ್ಕ , ರಾಮಣ್ಣ ಮೇಸ್ತ್ರಿ , ಸುಜಾತ , ಹರೀಶ ಕೆ., ಹರೀಶ್ ಸುವರ್ಣ ಸೋಲುಂಡಿದ್ದಾರೆ.
ಧರ್ಮಸ್ಥಳ ವಾರ್ಡ್-ರಲ್ಲಿ ಬಿಜೆಪಿ ಬೆಂಬಲಿತರಾದ ಸುಧಾಕರ, ಕಮಲ , ರೇವತಿ ಮತಗಳನ್ನು ಪಡೆದು ಜಯ ಸಾಧಿಸಿದ್ದಾರೆ. ಸುನಿಲ್ , ಪೂರ್ಣಿಮ , ಸರೋಜ ಸೋಲು ಕಂಡಿದ್ದಾರೆ.
ಧರ್ಮಸ್ಥಳ ವಾರ್ಡ್-3ರಲ್ಲಿ ಬಿಜೆಪಿ ಬೆಂಬಲಿತರಾದ ಸುನಿತಾ, ಸುಧಾಕರ, ಶರ್ಮಿಳಾ, ಶ್ರೀನಿವಾಸ ರಾವ್  ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಹೊನ್ನಮ್ಮ , ಚರಣ್‌ರಾಜ್ , ಲಕ್ಷ್ಮೀ ಭಟ್ , ಕೆ. ನಂದಾ  ಸೋಲುಂಡಿದ್ದಾರೆ.
ಧರ್ಮಸ್ಥಳ ವಾರ್ಡ್-4ರಲ್ಲಿ ಬಿಜೆಪಿ ಬೆಂಬಲಿತರಾದ ಸುನಿತಾ , ಜಯ , ರವಿಕುಮಾರ್  ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಯೋಗೀನಿ , ಸಾವಿತ್ರಿ ಕೆ. , ಮಾತುಕುಟ್ಟಿ ಸೋಲು ಅನುಭವಿಸಿದ್ದಾರೆ.
ಧರ್ಮಸ್ಥಳ ವಾರ್ಡ್ರ-5 ಲ್ಲಿ ಬಿಜೆಪಿ ಬೆಂಬಲಿತರಾದ ದಿನೇಶ್ ರಾವ್ , ರೀನಾ  ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಚಂದ್ರಹಾಸ , ಲಾಲಿಮಣಿ  ಸೋಲು ಕಂಡಿದ್ದಾರೆ.
ಧರ್ಮಸ್ಥಳ ವಾರ್ಡ್-6ರಲ್ಲಿ ಕಾಂಗ್ರೆಸ್ ಬೆಂಬಲಿತರಾದ ಮಾಜಿ ಅಧ್ಯಕ್ಷ ಚಂದನ್‌ಪ್ರಸಾದ್ ಕಾಮತ್ , ಗಾಯತ್ರಿ ಹೆಗ್ಡೆ  ಮತಗಳನ್ನು ಪಡೆದು ಜಯ ಸಾಧಿಸಿದ್ದಾರೆ. ಲೀಲಾಧರ ಶೆಟ್ಟಿ , ಕುಸುಮ  ಸೋಲುಂಡಿದ್ದಾರೆ.
ಧರ್ಮಸ್ಥಳ ವಾರ್ಡ್-7ರಲ್ಲಿ ಬಿಜೆಪಿ ಬೆಂಬಲಿತರಾದ ಮುರಲೀಧರ ದಾಸ್ , ವಿಮಲ , ದಯಾಲಿನಿ ಕೆ., ಅಶ್ರಿತ್ ಜೈನ್  ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಗಣೇಶ್ ಎ. , ಪುಷ್ಪಾವತಿ , ಕೇಶವತಿ , ಮಾಜಿ ಅಧ್ಯಕ್ಷ ಕೇಶವ ಗೌಡ , ಕೇಶವ  ಪರಾಭವಗೊಂಡಿದ್ದಾರೆ.
ಧರ್ಮಸ್ಥಳ ವಾರ್ಡ್-8ರಲ್ಲಿ ಬಿಜೆಪಿ ಬೆಂಬಲಿತರಾದ ಲಕ್ಷ್ಮೀ , ಕಿಶೋರ ಭಂಡಾರಿ, ವಸಂತಿ , ರಾಮಚಂದ್ರ ರಾವ್  ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಉಳಿದಂತೆ ಗೀತಾ , ವಿಶ್ವನಾಥ , ಆಶಾ , ತುಕರಾಮ  ಸೋಲು ಕಂಡಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.