ಲಾಯಿಲ : ಗ್ರಾಮ ಪಂಚಾಯತ್ 20 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 15 ಮಂದಿ ಬಿಜೆಪಿ ಬೆಂಬಲಿತರು ಜಯಗಳಿಸಿ ಮತ್ತೆ ಅಧಿಕಾರಕ್ಕೆ ಬಂದಿದ್ದು ಎಸ್.ಡಿ.ಪಿಐ3 ಕಾಂಗ್ರೆಸ್ 1 ಮತ್ತು ಪಕ್ಷೇತರ 1 ಅಭ್ಯರ್ಥಿಗಳು ಜಯಗಳಿಸಿದ್ದಾರೆ.
ವಾರ್ಡ್ 1ರಲ್ಲಿ ಬಿಜೆಪಿ ಬೆಂಬಲಿತರಾದ ಜಯಂತಿ , ಜಯಂತಿ ಕೆ.ಎಂ. , ಮೋಹನದಾಸ ಬೈರ ಮತ ಪಡೆದು ಜಯಗಳಿಸಿದ್ದಾರೆ. ಪಕ್ಷೇತರ ಅಭ್ಯರ್ಥಿ ಪ್ರಸಾದ್ ಶೆಟ್ಟಿ ಅಧಿಕ ಮತ ಪಡೆದು ಅವರ ನೇರ ಸ್ಪರ್ಧಿ ಬಿಜೆಪಿ ಬೆಂಬಲಿತ ಗಿರೀಶ್ ಡೋಂಗ್ರೆ ಯವರನ್ನು ಸೋಲಿಸಿದ್ದಾರೆ. ಕಾಂಗ್ರಸ್ ಅಭ್ಯರ್ಥಿಗಳಾದ ರೇವತಿ , ಜೋಕಿಂ ಸಿಕ್ವೇರಾ , ಹರೀಶ, ಹೇಮಲತಾ ಸೋಲು ಕಂಡಿದ್ದಾರೆ.
ವಾರ್ಡ್2ರಲ್ಲಿ ಬಿಜೆಪಿ ಬೆಂಬಲಿತರಾದ ಚಿದಾನಂದ ಶೆಟ್ಟಿ, ಆಶಾ ಬೆನೆಡಿಕ್ಟ್ ಸಲ್ದಾನ ಅಧಿಕ ಮತ ಪಡೆದು ಜಯಗಳಿಸಿದ್ದಾರೆ ಈ ಕ್ಷೇತ್ರದಿಂದ ರಜನಿ ಅವಿರೋಧ ಆಯ್ಕೆಯಾಗಿದ್ದಾರೆ. ಪಕ್ಷೇತರರಾದ ಆನಂದ ಹೆಗ್ಡೆ , ಬೇಭಿ ಹರೀಶ್ , ವಸಂತ ರಾಣೆ ಮತವನ್ನು ಪಡೆದು ಪರಾಜಯಗೊಂಡಿದ್ದಾರೆ
ವಾರ್ಡ್ 3ರಲ್ಲಿ ಬಿಜೆಪಿ ಬೆಂಬಲಿತರಾದ ಅರವಿಂದ ಕುಮಾರ್, ಗಣೇಶ್ , ಸುಗಂಧಿ ಮತವನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತರಾದ ದಿವಾಕರ ಪೂಜಾರಿ, ನಾಗರಾಜ್ ಎಸ್. ಮತವನ್ನು ಪಡೆದು ಸೋಲೊಪ್ಪಿಕೊಂಡಿದ್ದಾರೆ. ಪಕ್ಷೇತರರಾಗಿ ಜಯಲಕ್ಷ್ಮಿ, ಪ್ರೇಮಲತಾ, ಫ್ರಾನ್ಸಿಸ್ ಡಿ’ಸೋಜಾ ಮತವನ್ನು ಪಡೆದು ಸೋಲು ಕಂಡಿದ್ದಾರೆ.
ವಾರ್ಡ್ 4ರಲ್ಲಿ ಬಿಜೆಪಿ ಬೆಂಬಲಿತರಾದ ಆಶಾಲತಾ , ಸವಿತಾ , ಹರಿಕೃಷ್ಣ , ದಿನೇಶ್ ಶೆಟ್ಟಿ, ಮತವನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತರಾದ ಖಾಲಿದ್ , ಗ್ರೇಸಿಲೋಬೋ , ಸಾವಿತ್ರಿ ಮತವನ್ನು ಪಡೆದು ಸೋಲು ಕಂಡಿದ್ದಾರೆ. ಕಮ್ಯೂನಿಸ್ಟ್ ಬೆಂಬಲಿತ ಎಲ್. ಮಂಜುನಾಥ, ಪಕ್ಷೇತರರಾದ ಸುರೇಶ್ ಬೈರ , ಜಗನ್ನಾಥ , ಎಸ್.ಡಿ.ಪಿ.ಐ ಬೆಂಬಲಿತರಾದ ರಿಯಾಝ್ , ಸಲೀಂ ಮತವನ್ನು ಪಡೆದು ಸೋಲೊಪ್ಪಿಕೊಂಡಿದ್ದಾರೆ.
ವಾರ್ಡ್ ರಲ್ಲಿ ಎಸ್.ಡಿ.ಪಿ.ಐ ಬೆಂಬಲಿತರಾದ ಮರಿಯಮ್ಮ , ಸಲೀಂ, ಶಮಾ ಜಯಗಳಿಸಿದ್ದಾರೆ. ಬಿಜೆಪಿ ಬೆಂಬಲಿತರಾದ ಸುಬ್ರಾಯ ಉಪಾಧ್ಯಾಯ , ಸವಿತಾ , ನೇತ್ರಾ , ಹಾಗೂ ಕಾಂಗ್ರೆಸ್ ಬೆಂಬಲಿತರಾದ ಝೀನತ್ , ಅಬ್ದುಲ್ ರಹಿಮಾನ್ , ವಿಲ್ಮಾಶಾಲೆಟ್ ಪಿಂಟೊ , ಪಕ್ಷೇತರರಾದ ಮಹಮ್ಮದ್ ಶರೀಫ್ , ಉದಯ ಕುಮಾರ್ ಸೋಲು ಕಂಡಿದ್ದಾರೆ.
ವಾರ್ಡ್ ರಲ್ಲಿ ಬಿಜೆಪಿ ಬೆಂಬಲಿತರಾದ ಮಹೇಶ್ , ಹರೀಶ್ ಕುಲಾಲ್ , ಮತವನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತ ರೇವತಿ ಅಧಿಕ ಮತ ಪಡೆದು ಜಯಗಳಿಸಿದ್ದಾರೆ. ಬಿಜೆಪಿ ಬೆಂಬಲಿತ ವಸಂತಿ , ಕಾಂಗ್ರೆಸ್ನಿಂದ ಅಶೋಕ್ , ರಾಜೇಶ್ ಸೋಲೊಪ್ಪಿಕೊಂಡಿದ್ದಾರೆ.