ನೆರಿಯ: ಇಲ್ಲಿಯ ಬಾಂಜಾರು ಮಲೆ ನಿವಾಸಿ ಸತೀಶ ಎಂಬವರ ಮದುವೆ ಮೂಡಿಗೆರೆ ತಾಲೂಕಿನ ಬಿಳಿಗುಳಿಯಲ್ಲಿ ಇಂದು ನಡೆಯಲಿದ್ದು, ಮದುವೆಗೆ ಮನೆಯಿಂದ ಹೊರಟ ಮದುಮಗನ ಜೀಪು ಮತ್ತು ರಿಟ್ಸ್ ಪರಸ್ಪರ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ ಘಟನೆ ಡಿ.30 ರಂದು ಬೆಳಿಗ್ಗೆ ನಡೆದಿದೆ.
ಘಟನೆಯಿಂದಾಗಿ ಮದುಮಗ ಸತೀಶ್ ಹಾಗೂ ಜೀಪಿನಲ್ಲಿದ್ದ ಸಹ ಪ್ರಯಾಣಿಕರಿಗೆ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.