ಉಜಿರೆ: ಉಜಿರೆ ನಿವಾಸಿ ಮಂಜುನಾಥ ಪ್ರಭು ರವರ ಪುತ್ರ, ದಕ್ಷಿಣ ಆಫ್ರಿಕಾದ ಉಗಾಂಡದಲ್ಲಿ ಉದ್ಯೋಗದಲ್ಲಿರುವ ಬಿ. ವೆಂಕಟೇಶ್ ಪ್ರಭು (೫೫.ವ) ರವರು ಡಿ.27 ರಂದು ದಕ್ಷಿಣ ಆಫ್ರಿಕಾದಲ್ಲಿ ನಿಧನರಾದರು.
ನ್ಯೂಮೋನಿಯ ಜ್ವರದಿಂದ ಬಳಲುತ್ತಿದ್ದ ಇವರು ಚಿಕಿತ್ಸೆಗೆ ಸ್ಪಂದಿಸದೆ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.
ಮೃತರು ಪತ್ನಿ ಶೋಭ ಪ್ರಭು, ಪುತ್ರಿ ಈಶಾ ಪ್ರಭು, ಪುತ್ರ ಆಶಿಶ್ ಪ್ರಭು, ಸಹೋದರರಾದ ಪ್ರಭಾತ್ ಪ್ರಭು, ಗಣೇಶ ಪ್ರಭು, ಸಹೋದರಿಯರು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಉಗಾಂಡದಲ್ಲಿ ನಡೆಯಲಿದೆ.