ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ 46ಗ್ರಾಮ ಪಂಚಾಯತುಗಳಲ್ಲಿ ಚುನಾಯಿತ ಆಡಳಿತ ಮಂಡಳಿಯ ಸದಸ್ಯರ ಆಯ್ಕೆಗೆ ಇಂದು ( ಡಿ.೨೭ರಂದು) ನಡೆದ ಚುನಾವಣೆ ಯಲ್ಲಿ ಶೇ78.43 ಮತದಾನ ದಾಖಲಾಗಿದೆ.
79930 ಪುರುಷರು ಮತ್ತು 79875ಮಹಿಳೆಯರು ಸೇರಿದಂತೆ ಒಟ್ಟು 159814 ಮಂದಿ ಮತದಾರರು ಈ ಬಾರಿ ಮತ ಚಲಾಯಿಸುವ ಮೂಲಕ ಈ ಫಲಿತಾಂಶ ದಾಖಲಾಗಿದೆ.
ಈ ಬಾರಿ 101000 ಪುರುಷ ಮತದಾರರು ಮತ್ತು 102164 ಮಹಿಳಾ ಮತದಾರರು ಸೇರಿ ದಂತೆ ಒಟ್ಟು 201764 ಮತದಾರರು ಇದ್ದರು. ಇವರಲ್ಲಿ 79960 ಪುರುಷರು ಮತ್ತು 79875 ಮಹಿಳೆಯರು ಸೇರಿದಂತೆ 159814 ಮಂದಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ತಾಲೂಕಿನಾದ್ಯಂತ ಶಾಂತಿಯುತವಾಗಿ ಮತದಾನ ನಡೆದಿರುವುದಾಗಿ ವರದಿಯಾಗಿದೆ.