ಉರಗತಜ್ಞ ಸ್ನೇಕ್ ಪ್ರಕಾಶ್ರಿಂದ ರಕ್ಷಣೆ
ಧರ್ಮಸ್ಥಳ: ಧರ್ಮಸ್ಥಳ ಗ್ರಾಮದ ಪೊಸೋಳಿಕೆ ನಿವಾಸಿ ಪಾಪಚ್ಚನ್ ರವರ ತೊಟದಲ್ಲಿ ಇಂದು(ಡಿ.26) ಮಧ್ಯಾಹ್ನ ಸುಮಾರು 12 ಅಡಿ ಉದ್ದವಿರುವ ಕಾಳಿಂಗ ಸರ್ಪ ಪತ್ತೆಯಾಗಿದೆ. ಸುಮಾರು 1 ವಾರದಿಂದ ಈ ಪ್ರದೇಶದಲ್ಲಿ ಕಾಳಿಂಗ ಸರ್ಪ ಓಡಾಡುತ್ತಿದ್ದು, ಇಂದು ಕಾಳಿಂಗ ಸರ್ಪವನ್ನು ಕಂಡ ತಕ್ಷಣ ಪಾಪಚ್ಚನ್ ರವರು ಧರ್ಮಸ್ಥಳದ ಉರಗತಜ್ಞ ಸ್ನೇಕ್ ಪ್ರಕಾಶ್ ರವರಿಗೆ ವಿಚಾರ ತಿಳಿಸಿದ್ದರು.
ಸ್ಥಳಕ್ಕೆ ಧಾವಿಸಿದ ಸ್ನೇಕ್ ಪ್ರಕಾಶ್ ರವರು ಸೂಕ್ತ ಕಾರ್ಯಾಚರಣೆ ನಡೆಸಿ ಕಾಳಿಂಗ ಸರ್ಪವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇವರು ಈಗಾಗಲೇ 2700 ಹಾವುಗಳನ್ನು ಹಿಡಿದಿದ್ದು, ಇದು 102ನೇ ಕಾಳಿಂಗ ಸರ್ಪವಾಗಿದೆ. ಕಾಳಿಂಗ ಸರ್ಪವನ್ನು ಚಾರ್ಮಾಡಿಯ ರಕ್ಷಿತಾರಣ್ಯಕ್ಕೆ ಬಿಡಲಾಗಿದೆ.