ಬೆಳಾಲು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯಸಭೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ರೂ. 5.16ಲಕ್ಷ ನಿವ್ವಳ ಲಾಭ

ಬೆಳಾಲು: ಬೆಳಾಲು ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಡಿ.24 ರಂದು ಬೆಳಾಲು ಶ್ರೀ ಧ.ಮಂ. ಪ್ರೌಢ ಶಾಲೆಯಲ್ಲಿ ಜರುಗಿತು.
ಸಂಘದ ಅಧ್ಯಕ್ಷ ಎಸ್.ಯೋಗೀಶ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,  ಸಂಘದ ಬೆಳವಣಿಗೆಗೆ ಸಹಕರಿಸಿದ ಎಲ್ಲಾ ಸದಸ್ಯರಿಗೂ ಕೃತಜ್ಞತೆ ಸಲ್ಲಿಸಿದರು. ಸಂಘವು ಗ್ರಾಮದ ಎಲ್ಲಾ ಸಂಘ ಸಂಸ್ಥೆಗಳೊಂದಿಗೆ ಸಹಕರಿಸುತ್ತದೆ. ಮುಂದಕ್ಕೂ ಎಲ್ಲರೂ ಸಹಕಾರ ನೀಡುವುದರೊಂದಿಗೆ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಹಾಲು ಒಕ್ಕೂಟದ ತಾಲೂಕು ವಿಭಾಗದ ವ್ಯವಸ್ಥಾಪಕ ಡಾ| ನಿತ್ಯಾನಂದ ಭಕ್ತ ಭಾಗವಹಿಸಿ ಮಾತನಾಡಿದರು. ಸಂಘದ ಉಪಾಧ್ಯಕ್ಷ ಪ್ರವೀಣ್ ಜೈನ್, ನಿರ್ದೇಶಕರುಗಳಾದ ದೇವಪ್ಪ ಗೌಡ, ಉಮೇಶ್ ಗೌಡ, ಜಾರಪ್ಪ ಗೌಡ, ಯುವರಾಜ ಗೌಡ, ಡೊಂಬಯ್ಯ ಗೌಡ, ಕೃಷ್ಣಪ್ಪ ನಾಕ, ಬಿರ್ಮಣ ಪೂಜಾರಿ, ಸುಲೈಮಾನ್, ಮಾಣಿಗ, ಶೀಲಾ ಬಿ.ಎಸ್ ಉಪಸ್ಥಿತರಿದ್ದರು.
ನಿರ್ದೇಶಕಿ ವಿಶಾಲಾಕ್ಷಿ ಕೆ. ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಗೌಡ ವರದಿ ವಾಚಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸಿಬ್ಬಂದಿಗಳಾದ ಕಂಪ್ಯೂಟರ್ ಸಹಾಯಕಿ ವಾಣಿ, ಹಾಲು ಪರೀಕ್ಷಕ ದಿವಾಕರ, ಬಿ.ಎಂ.ಸಿ. ಸಹಾಯಕ ಹರಿಪ್ರಸಾದ್ ರೈ ಉಪಸ್ಥಿತರಿದ್ದು, ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.