ನಾವೂರು: ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಧನುರ್ಮಾಸದ 10 ನೆಯ ದಿನದ ವಿಷ್ಣು ಸಹಸ್ರನಾಮ ಪಠಣ ಹಾಗೂ ಗೀತಾ ಜಯಂತಿ ಆಚರಣೆಯನ್ನು ಡಿ.25 ರಂದು ನಡೆಸಲಾಯಿತು.
ಆಹ್ವಾನಿತರಾಗಿ ಆಗಮಿಸಿದ ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್ ಹಾಗೂ ಪ್ರತಾಪ ಸಿಂಹ ನಾಯಕ್, ಖ್ಯಾತ ವೈದ್ಯರಾದ ಉಜಿರೆಯ ಡಾ.ಅಶ್ವಿನಿ ಉದ್ಯಾವರ(ಎಂ.ಡಿ), ಬೆನಕ ಆಸ್ಪತ್ರೆಯ ಡಾ.ಗೋಪಾಲಕೃಷ್ಣ, ಇಂಜಿನಿಯರ್ ಜಗದೀಶ ಪ್ರಸಾದ್, ಎನ್ ಲಕ್ಷ್ಮಣ ಗೌಡ ಇವರನ್ನು ಸ್ವಾಗತಿಸಿದರು. ನಾವೂರು ದೇವಸ್ಥಾನ ಸೇವಾ ಟ್ರಸ್ಟ್ ನ ಅಧ್ಯಕ್ಷ ಎ. ಬಿ. ಉಮೇಶ್ ಹಾಗೂ ಡಾ| ಪ್ರದೀಪ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.