ಕಳೆಂಜ ಗ್ರಾಮ ಪಂಚಾಯತ್ನಲ್ಲಿ 13 ಸ್ಥಾನಕ್ಕೆ 30 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಕಳೆಂಜ ಗ್ರಾಮ ಕ್ಷೇತ್ರ-1ರಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ಗಿರಿಜಾ ದಾಸೋಡಿ, ಪ್ರಸನ್ನ ಎ.ಪಿ ಮಾಣಿಗೇರಿ, ಮಮತಾ ಎಂ.ಕೆ ಅಶ್ವತ್ತಡಿ, ಮಂಜುನಾಥ ಹೆಚ್. ಹಾರಿತ್ತಕಜೆ, ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿಗಳಾಗಿ ಕೆ. ಕುಶಾಲಪ್ಪ ಗೌಡ ಕಜೆ, ರೇವತಿ ಪುಂಡೈದಬನ, ಸೋಮಪ್ಪ ಪೂಜಾರಿ, ಕಮ್ಯುನಿಸ್ಟ್ ಬೆಂಬಲಿತರಾಗಿ ದೇವಕಿ ಎ. ಗಾಳಿತೋಟ ಕಣದಲ್ಲಿದ್ದಾರೆ.
ಕ್ಷೇತ್ರ-2ರಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ಗಂಗಾಧರ ಕೆ. ಭಂಡಾರಿ, ಮಮತಾ, ಲತಾ ಗಂಗಾಧರ, ಹರೀಶ್ ಕೆ.ಬಿ ಕೋಯಿಲಾ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ, ಜಿಜೋಯಿ, ದಿನೇಶ್ ಬಿ, ಲಲಿತಾ, ಪಕ್ಷೇತರರಾಗಿ ಕೆ.ಹೆಚ್ ಜನಾರ್ದನ ಕುಲಾಲ್, ಕಮ್ಯುನಿಸ್ಟ್ ಬೆಂಬಲಿತರಾಗಿ ಜಯಶ್ರೀ ಕಣದಲ್ಲಿದ್ದಾರೆ.
ಕ್ಷೇತ್ರ-3ರಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ಕುಸುಮ ಬಿ ಕಲ್ಲದಂಬೆ, ಗಣೇಶ್ ಕುಂದರ್, ಮೀನಾಕ್ಷಿ ಎನ್ ಭಂಡಾರಿ ಮಜಲು, ವಿಶ್ವನಾಥ ಕಲ್ಲಗುಡ್ಡೆ, ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿಗಳಾಗಿ ಎಲಿಯಮ್ಮ ಗುಂಡಿಗದ್ದೆ, ವಸಂತ ಪೂಜಾರಿ, ಕಮ್ಯುನಿಸ್ಟ್ ಬೆಂಬಲಿತರಾಗಿ ಶುಭ, ಪಕ್ಷೇತರರಾಗಿ ಕೆ. ಶ್ರೀಧರ ರಾವ್, ಕ್ಷೇತ್ರ-4ರಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ಭಾಗೀರಥಿ, ಸಂತೋಷ್ ಕುಮಾರ್, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ಟಿ.ಎಸ್ ನಿತ್ಯಾನಂದ ರೈ ಶಿಬರಾಜೆ, ಪ್ರೇಮಾ ಬಿ.ಎಸ್ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.
ನಿತ್ಯಾನಂದ ರೈ ಶಿಬರಾಜೆ ನಿಡ್ಲೆ ಗ್ರಾ.ಪಂ.ನಲ್ಲಿ ೨ ಬಾರಿ ಅಧ್ಯಕ್ಷರಾಗಿ, ಪ್ರೇಮ ಬಿ.ಎಸ್ ನಿಡ್ಲೆ ಗ್ರಾ.ಪಂ ಅಧ್ಯಕ್ಷರಾಗಿ, ಸೋಮಪ್ಪ ಪೂಜಾರಿ ನಿಡ್ಲೆ ಗ್ರಾ.ಪಂ. ಉಪಾಧ್ಯಕ್ಷರಾಗಿ, ಕುಶಾಲಪ್ಪ ಗೌಡ ನಿಡ್ಲೆ ಹಾಗೂ ಕಳೆಂಜ ಗ್ರಾ.ಪಂ. ಸದಸ್ಯರಾಗಿ, ಮಂಜುನಾಥ ನಿಡ್ಲೆ ಗ್ರಾ.ಪಂ ಸದಸ್ಯರಾಗಿ, ಶ್ರೀಧರ ರಾವ್ ನಿಡ್ಲೆ ಗ್ರಾ.ಪಂ ಸದಸ್ಯರಾಗಿ, ಹರೀಶ್ ಕೆ.ಬಿ ಕಳೆಂಜ ಗ್ರಾ.ಪಂ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.