ಉಜಿರೆ : ಉಜಿರೆ ಸಂತ ಅಂಥೋಣಿ ಚರ್ಚ್ ನಲ್ಲಿ ಸಂಭ್ರಮದ ಕ್ರಿಸ್ಮಸ್ ಆಚರಿಸಲಾಹಿತು. ವಂ. ಫಾ. ಉದಯ್ ಜೋಸೆಫ್ ದಿವ್ಯ ಬಲಿಪೂಜೆ ಅರ್ಪಿಸಿದರು.
ಧರ್ಮಗುರುಗಳಾದ ವಂ. ಫಾ. ಜೇಮ್ಸ್ ಡಿಸೋಜಾ ಸಹಕರಿಸಿದರು. ದಿವ್ಯ ಬಲಿ ಪೂಜೆ ಮೊದಲು ಕ್ರಿಸ್ಮಸ್ ಕ್ಯಾರಲ್ಸ್ ಜರಗಿತು. ಕೊರೋನಾ ಕೋವಿಡ್ 19 ಮಹಾಮಾರಿ ಯಿಂದ ಈ ಬಾರಿ ಬಹಳ ಸರಳವಾಗಿ ಸರಕಾರದ ನಿಯಮದಂತೆ ಆಚರಿಸಲಾಯಿತು. ಭಕ್ತದಿಗಳು ನವ ಉಡುಪುಗಳನ್ನು ಧರಿಸಿ ಕ್ರಿಸ್ಮಸ್ ಸಂಭ್ರಮದಲ್ಲಿ ಭಾಗಿಯಾದರು.