ಕೊರೊನಾ ಜನಜಾಗೃತಿ: ಕನ್ನಡ ಕಿರುಚಿತ್ರ ‘ಪರಿವತ೯ನೆ’ ಬಿಡುಗಡೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಜಿ.ಕೆ ರೀಯಲ್ ಇಮೇಜಸ್ ಬೆಂಗಳೂರು ಇವರ ಸಹಕಾರದೊಂದಿಗೆ ರಾಜೀವ್ ಬಿ.ಹೆಚ್ ಬೆಳ್ತಂಗಡಿ ಇವರ ಪರಿಕಲ್ಪನೆ ಹಾಗೂ ನಿರ್ದೇಶನದಲ್ಲಿ ಕರೋನ ಸೋಂಕಿನ ಜನಜಾಗೃತಿಗಾಗಿ ಹೊರ ತಂದ ಕನ್ನಡ ಕಿರುಚಿತ್ರ `ಪರಿವರ್ತನೆ’ಇದರ ಬಿಡುಗಡೆ ಕಾರ್ಯಕ್ರಮ ಡಿ.೨೪ರಂದು ಸುದ್ದಿ ಚಾಲನ್ ಸ್ಟುಡಿಯೋದಲ್ಲಿ ಜರುಗಿತು.


ಸುದ್ದಿ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ಡಾ| ಯು.ಪಿ ಶಿವಾನಂದ ಅವರು ಕಿರುಚಿತ್ರವನ್ನು ಬಿಡುಗಡೆಗೊಳಿಸಿ `ಪರಿವರ್ತನೆ’ ಚಿತ್ರದ ಆಶಯ ಉತ್ತಮವಾಗಿದ್ದು, ಚಿತ್ರ ತಂಡದ ಪ್ರಯತ್ನ ಈಡೇರಲಿ ಎಂದು ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಸುದ್ದಿ ಪತ್ರಿಕೆಯ ಪ್ರಬಂಧಕ ಮಂಜುನಾಥ ರೈ, ಪತ್ರಕರ್ತರ ಸಂಘದ ಅಧ್ಯಕ್ಷ ಅಶ್ರಫ್‌ಆಲಿಕುಂಞಿ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಅಮ್ಮಿ ಸಿಸ್ಟರ್, ಆರೋಗ್ಯ ಇಲಾಖಾ ಹೊರಗುತ್ತಿಗೆ ನೌಕರರ ಸಂಘದ ಸಂಚಾಲಕ ಅಜಯ್ ಕಾರ್ಯಕ್ರಮಕ್ಕೆ ಶುಭ ಕೋರಿದರು.


ಚಿತ್ರದ ನಿರ್ದೇಶಕ ಕಲಾವಿದ ಬಿ.ಹೆಚ್ ರಾಜೀವ್ ಅವರು ಪ್ರಸ್ತಾವಿಕವಾಗಿ ಮಾತನಾಡಿ, ಈ ಚಿತ್ರವನ್ನು ಜಿ.ಕೆ ರೀಯಲ್ ಇಮೇಜಸ್ ಬೆಂಗಳೂರು ನಿರ್ಮಾಣ ಮಾಡಿದ್ದು, ಕಲಾವಿದರಾದ ಪ್ರಕಾಶ್ ಸವಣಾಲು, ಮಾ. ಪ್ರಣಿತ್ ರಾಜ್, ಶ್ರೀಮತಿ ದೃತಿ ಬೆಳ್ತಂಗಡಿ, ಮಾ. ಶ್ರವಣ್ ಜಯಂತ್ ಬಂಗಾಡಿ, ಸುರೇಂದ್ರ ಸಂಜಯನಗರ ಅಭಿನಯಿಸಿದ್ದಾರೆ. ಮಿತ್ರ ಕೃಷ್ಣ ಬೆಳ್ತಂಗಡಿ

ಛಾಯಾಗ್ರಹಣ ಮಾಡಿದ್ದು, ಆರ್ಯನ್ ಮುಕ್ತರಾಜು ಬೆಂಗಳೂರು ಸಂಕಲನ, ಪ್ರಭಾಕರ ಪ್ರಭು ಚಿತ್ರಕಥೆ ಸಂಭಾಷಣೆಗೆ ಸಹಕರಿಸಿದ್ದಾರೆ, ಬೆಂಗಳೂರಿನ ೨೪ ರೀಲ್ಸ್ ಬರಗೂರು ಸ್ಟುಡಿಯೋದಲ್ಲಿ ಧ್ವನಿ ಮುದ್ರಣ ಮಾಡಲಾಗಿದೆ ಎಂದು ತಿಳಿಸಿದರು.
ಸಂಧ್ಯಾಶ್ರೀ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.