ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ವಾರ್ಷಿಕ ಮಹಾಸಭೆ

 

ವ್ಯವಹಾರ 183 ಕೋಟಿ, 89.95ಲಕ್ಷ ನಿವ್ವಳ ಲಾಭ , ಶೇ.14% ಡಿವಿಡೆಂಡ್
ಮಡಂತ್ಯಾರು: ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2೦19-2೦ ನೇ ಸಾಲಿನ ಮಹಾಸಭೆಯು ಡಿ.24 ರಂದು ವಿಶ್ವಕರ್ಮ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ  ಕೆ.ಅರವಿಂದ ಜೈನ್ ಇವರ ಅಧ್ಯಕ್ಷತೆಯಲ್ಲಿ ಜರಗಿತು. ಅಧ್ಯಕ್ಷರು ಆಗಮಿಸಿದ ಎಲ್ಲಾ ಸದಸ್ಯರನ್ನು ಸ್ವಾಗತಿಸಿದರು. ಸಂಘವು 2೦19-2೦ನೇ ಅರ್ಥಿಕ ವರ್ಷದಲ್ಲಿ 4416 ಸದಸ್ಯ ಬಲ ಹೊಂದಿದ್ದು, ಪಾಲು ಬಂಡವಾಳ ರೂ.2.15 ಕೋಟಿ, ರೂ.43.83 ಕೋಟಿ ಠೇವಣಿ ರೂ.4.95 ಕೋಟಿ ಎಲ್ಲಾ ರೀತಿಯ ನಿಧಿ ಹೊಂದಿರುತ್ತದೆ. ಮತ್ತು ರೂ.39.55 ಕೋಟಿ ಸಾಲ ಹೊರಬಾಕಿ ಇರುತ್ತದೆ. ಶೇಕಡಾ 95 ರಷ್ಟು ಸಾಲ ವಸೂಲಾತಿ ಆಗಿದ್ದು ಈ ಹಿಂದಿನಂತೆ ಲೆಕ್ಕಪರಿಶೋಧನೆಯಲ್ಲಿ ಎ ಶ್ರೇಣಿ ದೊರಕಿರುತ್ತದೆ. ಸಂಘದ ಸದಸ್ಯರಿಗೆ ವರಧಿ ವರ್ಷದಲ್ಲಿ ಶೇ 14 ರಷ್ಟು ಡಿವಿಡೆಂಡ್ ಘೋಷಿಸಲಾಯಿತು.

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಶ್ರೀಮತಿ ಧನಲಕ್ಷ್ಮೀ, ನಿರ್ದೇಶಕರಾದ  ಎಚ್.ಧರ್ಣಪ್ಪ ಗೌಡ,  ಕೆ.ಬಿ.ಮಹಾವೀರ ಬಲ್ಲಾಳ್,  ಅಬ್ಬುಲ್ ರಹಿಮಾನ್ ಪಡ್ಪು,  ಕಿಶೋರ್ ಕುಮಾರ್ ಶೆಟ್ಟಿ,  ಕುಮಾರ ನಾಯ್ಕ,  ಪದ್ಮನಾಭ ಸಾಲಿಯಾನ್ ,  ಜೋಯೆಲ್ ಗಾಡ್‌ಫ್ರೀ ಮೆಂಡೋನ್ಸ,  ರಮೇಶ್, ಶ್ರೀಮತಿ ತುಳಸಿ ಪೂಜಾರಿ ಜಿ, ಶ್ರೀಮತಿ ಉಷಲತಾ, ಮತ್ತು ದ.ಕ.ಜಿ.ಕೇಂದ್ರ ಸಹಕಾರಿ ಬ್ಯಾಂಕಿನ ಪ್ರತಿನಿಧಿ  ಸಿರಾಜುದ್ದೀನ್ ಉಪಸ್ಥಿತರಿದ್ದರು. 2೦19-2೦ ನೇ ಸಾಲಿನ ವರದಿಯನ್ನು ಮತ್ತು ಲೆಕ್ಕಪತ್ರಗಳನ್ನು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ  ಜೋಕಿಂ ಡಿ’ಸೋಜ ಮಂಡಿಸಿದರು, ಕಾರ್ಯಸೂಚಿಯಲ್ಲಿರುವ ವಿಷಯಗಳನ್ನು ಸಭೆಗೆ ಸಂಘದ ಸಿಬ್ಬಂಧಿಯವರಾದ ಮುತ್ತಪ್ಪ ಮೂಲ್ಯ,  ಗಣೇಶ್,  ಸವಿನ್ ಜೈನ್,  ಕಿಶನ್ ಕುಮಾರ್ ಓದಿ ಹೇಳಿದರು ಸಂಘದ ಮಹಿಳಾ ಸಿಬ್ಬಂದಿಯವರಾದ ಶ್ರೀಮತಿ ಪೂರ್ಣಿಮ, ಸುಪ್ರಿತ, ಶಶಿಕಲಾ ಪ್ರಾರ್ಥಿಸಿ, ಎಲ್ಲಾ ಸಿಬ್ಬಂದಿ ವರ್ಗದವರು ಸಹಕರಿಸಿದರು ಶ್ರೀಮತಿ ಪೂರ್ಣಿಮರವರು ಕಾರ್ಯಕ್ರಮ ನಿರೂಪಿಸಿ, ಉಪಾದ್ಯಕ್ಷರಾದ ಶ್ರೀಮತಿ ಧನಲಕ್ಷ್ಮೀ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.