ಮದ್ದಡ್ಕ ಯುವಕ ವಿಟ್ಲದಲ್ಲಿ ಮಹಡಿ ಮೇಲಿದ್ದ ಬಿದ್ದು ಮೃತ್ಯು

ಕುವೆಟ್ಟು ಗ್ರಾಮದ ಕೊತ್ತಲಮಜಲು ನಿವಾಸಿ ಪ್ರಸಾದ್ ಆಚಾರ್ಯ ದಾರುಣ ಸಾವು

ಕುವೆಟ್ಟು: ಇಲ್ಲಿಯ ಕೊತ್ತಲಮಜಲು ನಿವಾಸಿ ದಿ| ವಿಶ್ವನಾಥ ಆಚಾರ್ಯ ರವರ ಪುತ್ರ ಪ್ರಸಾದ್ ಆಚಾರ್ಯ ರವರು ವಿಟ್ಲದ ಕೇಪು ಎಂಬಲ್ಲಿ ಮಹಡಿ ಮೇಲಿದ್ದ ಬಿದ್ದು ಮೃತಪಟ್ಟ ಘಟನೆ ಡಿ.23 ರಂದು ತಡರಾತ್ರಿ ನಡೆದಿದೆ.
ಘಟನೆಯ ವಿವರ: ಪ್ರಸಾದ್ ಆಚಾರ್ಯ ರವರು ವಿಟ್ಲದ ಕೇಪು ಕುಕ್ಕೆಬೆಟ್ಟುವಿನಲ್ಲಿ ಸಂಬಂಧಿಕರೋರ್ವರ ಮನೆಯಲ್ಲಿದ್ದು ಚಿನ್ನದ ಕೆಲಸ ಮಾಡುತ್ತಿದ್ದರು. ಡಿ.೨೩ ರಂದು ತಡರಾತ್ರಿ ಮನೆಯ ಮಹಡಿಯ ಮೇಲಿಂದ ಆಕಸ್ಮಿಕವಾಗಿ ಬಿದ್ದ ಇವರನ್ನು ತಕ್ಷಣ ವಿಟ್ಲದ ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯೆ ಅಸುನೀಗಿದ್ದಾರೆ.
ತೀರಾ ಬಡ ಕುಟುಂಬದವರಾಗಿರುವ ಇವರು, ತಾಯಿ ಕುಸುಮಾ, ಸಹೋದರಿಯರಾದ ಪವಿತ್ರಾ, ರಾಧಿಕಾ, ಹರ್ಷಲಾ, ರೇಖಾ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.
ಮೃತರ ಮರಣೋತ್ತರ ಪರೀಕ್ಷೆಯನ್ನು ದೇರಳಕಟ್ಟೆ ಆಸ್ಪತ್ರೆಯಲ್ಲಿ ನಡೆಸಲಾಯಿತು. ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಯುತ್ತಿದೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.