ಇಬ್ಬರು ಅಡಿಕೆ ಕಳ್ಳರನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಸ್ಥಳೀಯರು
ಮಚ್ಚಿನ: ಮಚ್ಚಿನ ಗ್ರಾಮದ ಪುಂಚಪಾದೆ ಎಂಬಲ್ಲಿ ಅಡಿಕೆ ಕಳ್ಳತನ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಡಿ.24 ರಂದು ಬೆಳಕಿಗೆ ಬಂದಿದೆ.
ದಿನದಿಂದ ದಿನಕ್ಕೆ ದಾಖಲೆ ಮಟ್ಟದಲ್ಲಿ ಅಡಿಕೆ ಬೆಲೆ ಏರುತ್ತಿದ್ದು, ಸುಮಾರು ಒಂದೂವರೆ ತಿಂಗಳುಗಳಿಂದ ಪಿಲಿಗೂಡು, ದೇವರುಪಲಿಕೆ ಆಸುಪಾಸಿನಲ್ಲಿ ಅಡಿಕೆ ಕಳ್ಳತನ ನಡೆಯುತ್ತಿದ್ದು, ಸ್ಥಳೀಯರೇ ಕಾರ್ಯಾಚರಣೆಗಿಳಿದಿದ್ದರು.
ಇಂದು ಬೆಳಿಗ್ಗೆ ಪುಂಚಪಾದೆಯಲ್ಲಿ 50.ಕೆಜಿ ಅಡಿಕೆ ಗೋಣಿ ಮತ್ತು ಅಡಿಕೆ ಸುಲಿಯುವ ಮಣೆ ಪತ್ತೆಯಾಗಿದ್ದು, ಅಡಿಕೆ ಕಳ್ಳತನಕ್ಕೆ ಯತ್ನಿಸಿದ ಇಬ್ಬರು ಕಳ್ಳರನ್ನು ಸ್ಥಳೀಯರು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.