ಕೊಯ್ಯೂರು : ಕೊಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಂಘಗಳು ಸಂಘದ ವಾರ್ಷಿಕ ಮಹಾಸಭೆ ಡಿ.23 ರಂದು ಪಂಚದುರ್ಗಾ ಸಭಾ ಭವನದಲ್ಲಿ ಜರುಗಿತು.
ಸಹಕಾರಿ ಸಂಘದ ಅಧ್ಯಕ್ಷರಾದ ಉಜ್ವಲ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.ಸಂಘವು 105,75,59,267.97 ವಾರ್ಷಿಕ ವ್ಯವಹಾರ ಆಗಿದ್ದು ಕಳೆದ ಸಾಲಿಗಿಂತ 1,56,93,177. ಹೆಚ್ಚುವರಿ ವ್ಯವಹಾರ ಆಗಿರುತ್ತದೆ. ವ್ಯಾಪಾರ ವಹಿವಾಟಿನಲ್ಲಿ ರೂಪಾಯಿ.2,62,905.39 ಗಳಿಸಿದ್ದು, ವರದಿ ಸಾಲಿನಲ್ಲಿ 34,62,165.73 ಲಾಭಾಂಶ ಗಳಿಸಿರುತ್ತದೆ.
ಈ ಸಂದರ್ಭದಲ್ಲಿ ಅಧ್ಯಕ್ಷ ಉಜ್ವಲ್ ಕುಮಾರ್ ಮಾತನಾಡುತ್ತಾ ಸಂಘವು 7,75,93,048 ಕೋಟಿ ಠೇವಣಿ ಹೊಂದಿದೆ. ಮುಂದಿನ ದಿನಗಳಲ್ಲಿ ಸಂಘವು ಮತ್ತಷ್ಟು ಅಭಿವೃದ್ಧಿ ಹೊಂದುತ್ತಿರುವುದರಿಂದ ಸದಸ್ಯರ ಸಹಕಾರ ಅಗತ್ಯವಿದೆ ಎಂದು ಹೇಳಿದರು. ಹಾಗೂ ವರದಿ ಸಾಲಿನಲ್ಲಿ ಸದಸ್ಯರಿಗೆ ಶೇಕಡ 8 ಡಿವಿಡೆಂಟ್ ನ್ನು ಸಭೆಯಲ್ಲಿ ಘೋಷಿಸಿದರು.ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಶೋಕ ಭಟ್ ಪ್ರಸ್ತಾವಿಕವಾಗಿ ಮಾತನಾಡಿದರು. ವಾರ್ಷಿಕ ವರದಿಯನ್ನು ಸಂಘದ ಲೆಕ್ಕಿಗ ಮಮತ ರೈ ಸಭೆಯಲ್ಲಿ ವಾಚಿಸಿದರು.2019-20 ನೇ ಲೆಕ್ಕ ಪರಿಶೋಧನೆ, ಜಮಾ ಖರ್ಚು, ಮತ್ತು ಲಾಭ-ನಷ್ಟ ತಖ್ತೆಯನ್ನು ಕಾರ್ಯ ನಿರ್ವಹಣಾ ಅಧಿಕಾರಿ ಅನಂತ ಕೃಷ್ಣ ಭಟ್ ಮಂಡಿಸಿದರು.ಸಂಘದ ಉಪಾಧ್ಯಕ್ಷ ಡೀಕಯ್ಯ ಪೂಜಾರಿ, ನಿರ್ದೇಶಕರಾದ ಅಶೋಕ ಭಟ್, ನವೀನ್ ಕುಮಾರ್, ಎನ್.ಪರಮೇಶ್ವರ ಗೌಡ, ರವೀಂದ್ರ ಪಿ,ಪುರುಷೋತ್ತಮ, ಸಂಜೀವ ಎಮ್.ಕೆ,ಹೊನ್ನಪ್ಮ ಪೂಜಾರಿ, ಗುಲಾಬಿ ಗುಲಾಬಿ, ರೇವತಿ ಮತ್ತು ಯತೀಶ ಮತ್ತು ನವೋದಯ ಸಂಘದ ಮೇಲ್ವಿಚಾರಕ ಕೂಸಪ್ಪ ಗೌಡ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಸಿಬ್ಬಂದಿಗಳು ಸಹಕರಿಸಿದರು. ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ನಿರ್ದೇಶಕ ರವೀಂದ್ರ ಗೌಡ ಪೆರ್ಮದೆ ಸ್ವಾಗತಿಸಿದರು. ನಿರ್ದೇಶಕ ನವೀನ್ ಕುಮಾರ್ ಧನ್ಯವಾದವಿತ್ತರು.