ಅಳದಂಗಡಿ: ಇತಿಹಾಸ ಪ್ರಸಿದ್ಧ ತುಳುನಾಡಿನ ಭವ್ಯ ಪರಂಪರೆ ಅಳದಂಗಡಿ ಅರಮನೆಯ 25ನೇ ಅರಸರಾಗಿ 1995ರಲ್ಲಿ ಪಟ್ಟಾಭಿಷಿಕ್ತರಾದ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲರ ಪಟ್ಟಾಭಿಷೇಕದ ರಜತಮಹೋತ್ಸವ ಸಂಭ್ರಮವು ಇತ್ತೀಚೆಗೆ ನಡೆದಿದ್ದು ಅದರ ಅಂಗವಾಗಿ ಅಳದಂಗಡಿ ಅರಮನೆಯಲ್ಲಿ ಸೀಮೆಯ ಪ್ರಧಾನ ದೈವಗಳಿಗೆ ಧರ್ಮನೇಮವು ನಡೆಯುತ್ತಿದೆ.
ಬೆಳಿಗ್ಗೆ ತೋರಣ ಮುಹೂರ್ತ, ಸಂಜೆ ನಾವರ ಮಾಗಣೆಗುತ್ತಿನಿಂದ ಕೊಡಮಣಿತ್ತಾಯ ದೈವದ ಭಂಡಾರ ಬಂದು,ಸಂಜೆ ಅಳದಂಗಡಿ ಶ್ರೀ ಸೋಮನಾಥೇಶ್ವರಿ ದೇವಸ್ಥಾನದಿಂದ ಮೂಜಿಲ್ನಾಯ ದೈವದ ಭಂಡಾರವನ್ನು ಮೆರವಣಿಗೆಯ ಮೂಲಕ ಅರಮನೆಗೆ ತರಲಾಯಿತು. ಕೊಡಮಣಿತ್ತಾಯ ಮತ್ತು ಮೂಜಿಲ್ನಾಯ ದೈವದ ನೇಮ ನಡೆಯುತ್ತಿದೆ.
ಗಣ್ಯರು ಭಾಗಿ…
ಮೂಡಬಿದ್ರೆ ಜೈನಮಠದ ಚಾರುಕೀರ್ತಿ ಪಟ್ಟಚಾರ್ಯ ಭಟ್ಟಾರಕ ಮಹಾಸ್ವಾಮೀಜಿ, ಶ್ರೀ ರಾಮ ವಿಧ್ಯಾವರ್ದಕ ಸಂಘ ಪುತ್ತೂರು ಅಧ್ಯಕ್ಷ ಪ್ರಭಾಕರ ಭಟ್ ಕಲ್ಲಡ್ಕ,ಬಿಜೆಪಿ ರಾಜ್ಯಾದ್ಯಕ್ಷ, ಸಂಸದ ನಲಿನ್ ಕುಮಾರ್ ಕಟೀಲ್, ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಶಾಸಕ ಹರೀಶ್ ಪೂಂಜ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಕೆ ವಸಂತ ಬಂಗೇರ, ಜಗದೀಶ್ ಅಧಿಕಾರಿ,ಅರಸರ ಪಟ್ಟಾಭಿಷೇಕ ದ ರಜತ ಸಂಭ್ರಮೋತ್ಸವ ಸಮಿತಿ ಅಧ್ಯಕ್ಷ ರಘು ಎಲ್ ಶೆಟ್ಟಿ, ಕಾರ್ಯದ್ಯಕ್ಷರಾದ ದೇವೇಂದ್ರ ಹೆಗ್ಡೆ ಕೊಕ್ರಾಡಿ, ಶಶಿಕಿರಣ್ ಜೈನ್,ಶಿವಪ್ರಸಾದ್ ಅಜಿಲ ಹಾಗೂ ಅಜಿಲ ಸೀಮೆಗೆ ಸಂಬಂಧ ಪಟ್ಟ ಗುರಿಕಾರರು, ಊರವರು, ವಿವಿಧ ಕ್ಷೇತ್ರದ ಗಣ್ಯರು ಉಪಸ್ಥಿತರಿದ್ದರು.