ಬೆಳ್ತಂಗಡಿ ಅಡಿಕೆ ವರ್ತಕರ ಸಂಘ ದಿಂದ ಚೆಸ್ ದರ ಏರಿಕೆ ವಿರುದ್ಧ ನಾಳೆ ಪ್ರತಿಭಟನೆ.
ಬೆಳ್ತಂಗಡಿ: ಕರ್ನಾಟಕ ಸರಕಾರವು ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಶುಲ್ಕವನ್ನು 0.35%ರಿಂದ ಶೇಕಡ 1 ಏರಿಸಿರುವುದು. ಕೃಷಿ ರಂಗಕ್ಕೆ ಆತಂಕಕಾರಿ ಬೆಳವಣಿಗೆಯಾಗಿದೆ ಅಡಿಕೆ ವರ್ತಕರ ಸಂಘ ಬೆಳ್ತಂಗಡಿ ತಮ್ಮ ವ್ಯವಹಾರವನ್ನು ಮಾಡುತ್ತಿರುವ ಸಂದರ್ಭದಲ್ಲಿ ನಿರಂತರವಾಗಿ ರೈತಾಪಿ ವರ್ಗದ ಹಿತವನ್ನು ಕಾಯ್ದುಕೊಂಡು ಬಂದಿದ್ದು ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳಿಗೆ ಉತ್ತಮ ಧಾರಣೆಯನ್ನು ನೀಡುತ್ತಾ ಬಂದಿದ್ದೇವೆ. ಆದರೂ ದಾಸ್ತಾನು ಮಾರುಕಟ್ಟೆಯಲ್ಲಿನ ಏರಿಳಿತ ಸಾರಿಗೆ ಸಾಗಾಟ ವೆಚ್ಚ ಗಳಿಂದ ಬಹಳಷ್ಟು ಸಲ ಕಷ್ಟ-ನಷ್ಟ ಎದುರಿಸಿದೇವೆ.. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ರೈತಾಪಿ ವರ್ತಕ ವರ್ಗದ ಸಮಗ್ರ ಹಿತದೃಷ್ಟಿಯಿಂದ ತಾವು ಏರಿಕೆ ಮಾರುಕಟ್ಟೆ ಶುಲ್ಕವನ್ನು ಯಥಾಸ್ಥಿತಿಗೆ ಇಳಿಸಿ ಕರ್ನಾಟಕ ರಾಜ್ಯದೇಡೆ ಏಕರೂಪವಾಗಿರುವ ಕಾನೂನಿನ ಸಂಪೂರ್ಣ ಅನುಷ್ಠಾನಗೊಳಿಸಬೇಕೆಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವರಾದ ಸೋಮಶೇಖರ್ರವರಿಗೆ ತಹಸಿಲ್ದಾರ್ ಮುಖಾಂತರ ಬೆಳ್ತಂಗಡಿ ಅಡಿಕೆ ವರ್ತಕರ ಸಂಘದಿಂದ ಮನವಿ ನಾಳೆ.ಡಿ22ರಂದು ಸಲ್ಲಿಸಲಾಗುವುದು. ಆದ್ದರಿಂದ ಎಲ್ಲಾ ಅಡಿಕೆ ವರ್ತಕರ ಅಂಗಡಿ ಬಂದ್ ಇರುವುದರಿಂದ ರೈತರು ಸಹಕರಿಸಬೇಕಾಗಿ ವಿನಂತಿ.