ಬೆಳ್ತಂಗಡಿ : ವಿಮುಕ್ತಿ ಲಾಯಿಲ ಮತ್ತು ಉಜಿರೆ ಸಂತ ಅಂಥೋಣಿ ಚರ್ಚ್ ವತಿಯಿಂದ ಬೆಳ್ತಂಗಡಿ ಪೇಟೆಯಲ್ಲಿ ಇಂದು ಸಂಜೆ ಡಿ. 21ರಂದು ಕ್ರಿಸ್ಮಸ್ ಆಚರಣೆ ನಡೆಯಿತು.
ವಿಮುಕ್ತಿ ಸಂಸ್ಥೆ ಯಾ ವಂ. ಫಾ ವಿನೋದ್ ಮಸ್ಕರೇನ್ಹಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಡಂತ್ಯಾರ್ ಸೇಕ್ರೆಡ್ ಹಾರ್ಟ್ ಕಾಲೇಜಿನ ಪ್ರಾಂಶುಪಾಲರಾದ ವಂ. ಜೆರೋಮ್ ಡಿಸೋಜ ಶುಭ ಸಂದೇಶ ನೀಡಿದರು. ಈ ಸಂದರ್ಭ ಉಜಿರೆ ಚರ್ಚ್ ಧರ್ಮಗುರು ವಂ. ಫಾ. ಜೇಮ್ಸ್ ಡಿಸೋಜಾ, ಉಜಿರೆ ಕಾನ್ವೆಂಟ್ ಧರ್ಮ್ ಭಗಿನಿಯರು ಉಪಸ್ಥಿತರಿದ್ದರು.