ಮಚ್ಚಿನ: ಇಲ್ಲಿಯ ಬಳ್ಳಮಂಜ ಶ್ರೀ ಅನಂತೇಶ್ವರ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವದ ಪ್ರಯುಕ್ತ ಭಕ್ತಾಧಿಗಳಿಂದ ಅಕ್ಕಿ, ಬೆಲ್ಲ, ತೆಂಗಿನ ಕಾಯಿ, ಎಳನೀರಿನ ತುಲಾಭಾರ ಸೇವೆ ನಡೆಯಿತು
ಬ್ರಹ್ಮಶ್ರೀ ದೇರೆಬೈಲು ಶಿವಪ್ರಸಾದ್ ತಂತ್ರಿಗಳ ನೇತೃತ್ವದಲ್ಲಿ ಮಹಾ ಸಂಪ್ರೋಕ್ಷಣೆ, ತುಲಾಭಾರ ಸೇವೆ ಮತ್ತು ಅನ್ನ ಸಂತರ್ಪಣೆ ನಡೆಯಿತು. ಅನ್ನಸಂತರ್ಪಣೆ ಸೇವಾ ಕರ್ತರಾದ ದುಗ್ಗಪ್ಪ ಗೌಡ ಪೊಸಂದೋಡಿ ಹಾಗೂ ಸಾವಿರಾರು ಭಕ್ತಾಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ದೇವರ ಕೃಪೆಗೆ ಪಾತ್ರರಾದರು.