ಬೆಳ್ತಂಗಡಿ: ಇಲ್ಲಿಯ ಹನುಮಾನ್ ಕಾಂಪ್ಲೆಕ್ಸ್(ಬಾಳಿಗ ಬಿಲ್ಡಿಂಗ್)ನಲ್ಲಿ ಶ್ರೀ ಚಾಮುಂಡೇಶ್ವರಿ ಸೂಪರ್ ಬಜಾರ್ ಡಿ.21ರಂದು ಶುಭಾರಂಭಗೊಂಡಿತು
ಬೆಳಾಲು ಆರಿಕೋಡಿ ಚಾಮುಂಡೇಶ್ವರಿ ಕ್ಷೇತ್ರದ ಮೊಕ್ತೇಸರರಾದ ಡೊಂಬಯ್ಯ ಗೌಡ ಆರಿಕೋಡಿ, ಬೆಳ್ತಂಗಡಿ ಜನರಲ್ ಡಯೋಸಿಸ್ ಆಫ್ನ ವಿಕಾರ್ ರೆ|ಫಾ|ಜೋಸ್ ವಲಯ ಪರಂಬಿಲ್ ನೂತನ ಸಂಸ್ಥೆಯನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮಾತನಾಡಿ, ಬೆಳೆಯುತ್ತಿರುವ ಬೆಳ್ತಂಗಡಿ ನಗರಕ್ಕೆ ಇಂತಹ ಗೃಹೋಪಯೋಗಿ ಮಳಿಗೆ ಅಗತ್ಯವಾಗಿದ್ದು, ಗ್ರಾಹಕರ ಸೇವೆಯೊಂದಿಗೆ ಈ ಸಂಸ್ಥೆಯು ಪ್ರಗತಿಯತ್ತ ಮುನ್ನಡೆಯಲಿ ಎಂದು ಹಾರೈಸಿದರು.
ಮಾಜಿ ಶಾಸಕ ಕೆ.ವಸಂತ ಬಂಗೇರ ಮಾತನಾಡಿ, ವ್ಯಾಪಾರವೆಂದರೆ ಗ್ರಾಹಕ ಮತ್ತು ಮಾಲಕರ ನಡುವಿನ ಕೊಂಡಿ, ಗ್ರಾಹಕರೊಂದಿಗೆ ನಗುಮುಖದ ಸೇವೆಯಿಂದ ಅವರ ಅನುಕೂಲಕ್ಕೆ ತಕ್ಕಂತೆ ವ್ಯವಹಾರ ನಡೆಸಿದಾಗ ಪ್ರಗತಿ ಸಾಧ್ಯ . ಈ ಸಂಸ್ಥೆಯು ಉನ್ನತ ಪ್ರಗತಿಹೊಂದಲಿ ಎಂದು ಶುಭ ಹಾರೈಸಿದರು.
ಧರ್ಮಸ್ಥಳ ಜಮಾ ಉಗ್ರಾಣದ ಮ್ಯಾನೇಜರ್ ಬಿ.ಭುಜಬಲಿ, ಉಜಿರೆ ಬೆನಕ ಹೆಲ್ತ್ ಸೆಂಟರ್ನ ಮ್ಯಾನೇಜಿಂಗ್ ಡೈರೆಕ್ಟರ್ ಡಾ| ಗೋಪಾಲಕೃಷ್ಣ ಭಟ್, ಬೆಳ್ತಂಗಡಿ ನಗರ ಪಂಚಾಯತ್ ಉಪಾಧ್ಯಕ್ಷ ಜಯಾನಂದ ಗೌಡ, ಹನುಮಾನ್ ಕಾಂಪ್ಲೆಕ್ಸ್ನ ಮಾಲಕ ಯಶವಂತ್ ಆರ್. ಬಾಳಿಗ, ಬೆಳ್ತಂಗಡಿ ತಾ.ಪಂ. ಮಾಜಿ ಅಧ್ಯಕ್ಷ ಎನ್. ಜತ್ತನ್ನ ಗೌಡ, ಬೆಳ್ತಂಗಡಿ ಎಸ್. ಬಿಡಿ ಅಧಿಕಾರಿ ವಾಸು ನಾಯ್ಕ, ಉದ್ಯಮಿ ರಾಜೇಶ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ, ನ್ಯಾಯವಾದಿ ಸೇವಿಯರ್ ಪಾಲೆಲಿ ಮೊದಲಾದ ಗಣ್ಯರು ಉಪಸ್ಥಿತರಿದ್ದು, ನೂತನ ಸಂಸ್ಥೆಗೆ ಶುಭ ಹಾರೈಸಿದರು.
ಸಮಾರಂಭಕ್ಕೆ ಆಗಮಿಸಿದ ಅತಿಥಿ ಗಣ್ಯರನ್ನು ಸಂಸ್ಥೆಯ ಪಾಲದಾರರಾದ ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ ಮತ್ತು ರಮೇಶ್ ಮಂಗಳೂರು ಸ್ವಾಗತಿ ಗೌರವಿಸಿದರು.
ಈ ಸಂದರ್ಭದಲ್ಲಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಭಕ್ತ ಅಕ್ಷಯ್ ಪಡಂಗಡಿ, ದೀಪಕ್ ಗಾಣಿಗ ಬೆಳ್ತಂಗಡಿ ಇವರು ನಿರ್ಮಿಸಿರುವ ಆರಿಕೋಡಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿಯವರ ಭಾವಚಿತ್ರದ ಸ್ಮರಣಿಕೆಯನ್ನು ಹಸ್ತಾಂತರಿಸಿದರು.
ಪ್ರಮೋದ್ ದಿಡುಪೆ ಸ್ವಾಗತಿಸಿ, ಶ್ರೀ ಧ.ಮಂ ನ್ಯಾಚುರೋಪತಿ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಧರ್ಮೇಂದ್ರ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.