ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ

ಬೆಳ್ತಂಗಡಿ: ಮಹತೋಭಾರ ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ಬಳ್ಳಮಂಜದಲ್ಲಿ “ಷಷ್ಠಿ ಮಹೋತ್ಸವ “ಕೋವಿಡ್-19ರ ಮಾಗ೯ಸೂಚಿಯಂತೆ ಅತ್ಯಂತ ಸರಳ ಹಾಗೂ ಸಂಪ್ರದಾಯ ಬದ್ಧವಾಗಿ ಆಚರಿಸಲಾಯಿತು.


ಶ್ರೀ ದೇವಳದಲ್ಲಿ ಆಗಮಶಾಸ್ತ್ರ ರೀತಿಯಲ್ಲಿ ದೇವರ ಉತ್ಸವ ಹಾಗೂ ವಿಧಿ-ವಿಧಾನಗಳು ನಡೆಯಿತು. ಬಳಿಕ ತೆರಬಾಕಿಮಾರು ಗದ್ದೆಯಲ್ಲಿ ದೇವರ ರಥೋತ್ಸವ ವೈಭವ ಪೂಣ೯ವಾಗಿ ನಡೆಯಿತು. ಕಾಯ೯ಕ್ರಮದಲ್ಲಿ ಕೋವಿಡ್ ನಿಯಮವನ್ನು ಪಾಲಿಸಿ ಊರ ಹಾಗೂ ಪರವೂರ ಭಕ್ತರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.


ಷಷ್ಠಿ ಜಾತ್ರೆಯ ಸಂದಭ೯ ನಡೆಸಲಾಗುವ ಅತ್ಯಂತ ಶ್ರೇಷ್ಠ ಹರಕೆ ಯಾದ ಉರುಳು ಸೇವೆಯನ್ನು (ಮಡೆಸ್ನಾನ) ರದ್ದು ಪಡಿಸಲಾಗಿತ್ತು.ಬೆಳ್ಳಿ ಹರಕೆಗಳ ಮಾರಾಟ ಇರಲಿಲ್ಲ. ದೈನಂದಿನ ಸೇವೆ ಎಂದಿನಂತೆ ನಡೆಯಿತು. ರಸ್ತೆ ಬದಿಗಳಲ್ಲಿ ಹಾಗೂ ತೆರಬಾಕಿಮಾರು ಗದ್ದೆಯಲ್ಲಿ ಸಂತೆ ವ್ಯಾಪಾರ ಇರಲಿಲ್ಲ.
ದೇವಸ್ಥಾನದ ಅನುವಂಶೀಯ ಆಡಳಿತ ಮೋಕ್ತೇಸರ ಡಾ। ಹಷ೯ ಸಂಪಿಗೆತ್ತಾಯ ಅವರ ನೇತೃತ್ವದಲ್ಲಿ ಊರವರ ಸಹಕಾರದಲ್ಲಿ ಕಾಯ೯ಕ್ರಮಗಳು ಅತ್ಯಂತ ಶಿಸ್ತು ಬದ್ಧವಾಗಿ ಯಶಸ್ವಿಯಾಗಿ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.