ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ವಿವಿಧ ಅಮೀಷ ಒಡ್ಡಿ
೫೫ ಮಂದಿಯನ್ನು ಬಿಜೆಪಿಯವರು ತಪ್ಪಿಸಿದ್ದಾರೆ : ವಸಂತ ಬಂಗೇರ
ಪತ್ರಿಕಾಗೋಷ್ಠಿ
ಬೆಳ್ತಂಗಡಿ: ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಶಾಸಕರು, ಬಿಜೆಪಿ ಪಕ್ಷದ ಅಧ್ಯಕ್ಷರು ಹಾಗೂ ನಾಯಕರುಗಳು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ವಿವಿಧ ರೀತಿಯ ಆಮೀಷಗಳನ್ನು ಒಡ್ಡಿ, ಬೆದರಿಕೆಗಳನ್ನು ಹಾಕಿ ನಾವು ನಾಮಪತ್ರ ಹಾಕಿಸಬೇಕೆಂದು ಆಯ್ಕೆ ಮಾಡಿದ ಸುಮಾರು ೫೫ ಮಂದಿಯನ್ನು ತಪ್ಪಿಸಿದ್ದಾರೆ ಎಂದು ಮಾಜಿ ಶಾಸಕ ಕೆ. ವಸಂತ ಬಂಗೇರ ಹೇಳಿದರು.
ಅವರು ಡಿ.೧೯ರಂದು ಬೆಳ್ತಂಗಡಿ ಪ್ರೆಸ್ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಈ ಎಲ್ಲಾ ಕಾರಣಗಳಿಂದ ಮೂರು ಕಡೆ ಬಿಜೆಪಿಯ ಮೂರು ಮಂದಿ ಅಭ್ಯರ್ಥಿಗಳು ಆವಿರೋಧವಾಗಿ ಆಯ್ಕೆಯಾಗುವ ಅವಕಾಶವಾಗಿದೆ. ಇವತ್ತು ನಮ್ಮ ಪಕ್ಷದ ಕಲ್ಮಂಜ ಗ್ರಾಮದ ಅಭ್ಯರ್ಥಿ ಚಂದ್ರಕಲಾ ಮತ್ತು ಮಿತ್ತಬಾಗಿಲು ಗ್ರಾಮದ ಶಾರದ ಅವರನ್ನು ಬಲತ್ಕಾರವಾಗಿ ನಾಮಪತ್ರ ಹಿಂತೆಗೆದುಕೊಳ್ಳುವಂತೆ ಮಾಡಿದ್ದಾರೆ. ಪಕ್ಷದ ಚಿಹ್ನೆ ಹಾಕಬಾರದು ಎಂದು ಚುನಾವಣಾ ಆಯೋಗದ ಆದೇಶವಿದ್ದರೂ, ಪಕ್ಷದ ಚಿಹ್ನೆ ಹಾಕಿ ಆರು ಮಂದಿಯ ಅಭ್ಯರ್ಥಿಗಳ ಹೆಸರು ಹಾಕಿ ಪ್ರಚಾರ ಮಾಡುತ್ತಿದ್ದಾರೆ. ಜಾಗೃತರಾಗಿ ಹಿಂದೂಗಳೇ ಎಂದು ವಾಟ್ಸಪ್ನಲ್ಲಿ ಪ್ರಚಾರ ಜನರನ್ನು ವಂಚನೆ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ಯಾವುದೇ ಕಾನೂನು ಅನ್ವಯವಾಗುವುದಿಲ್ಲವೇ ಇದರ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದೇವೆ ಎಂದು ತಿಳಿಸಿದರು.
ಅಕ್ರಮ ಸಕ್ರಮ ಸಮಿತಿಯ ಅಧ್ಯಕ್ಷರಾಗಿರುವ ಶಾಸಕರು ಬಿಜೆಪಿಗೆ ಓಟು ಹಾಕದಿದ್ದಾರೆ ಸ್ಥಳೀಯ ಸಮಿತಿಯ ಅಧ್ಯಕ್ಷರು ನನಗೆ ತಿಳಿಸಿದರೆ, ಅಕ್ರಮ ಸಕ್ರಮ ಸತಿಯಲ್ಲಿ, ೯೪ಸಿಯಲ್ಲಿ ಜಾಗ ಮಂಜೂರು ಮಾಡುವುದಿಲ್ಲ ಅಲ್ಲದೆ ಮನೆ ಮಂಜೂರು ಮಾಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಮನೆ ಮಂಜೂರು ಆಗುವುದು ಪಂಚಾಯತದಲ್ಲಿ, ಇದರಲ್ಲಿ ಶಾಸಕರಿಗೆ ಯಾವುದೇ ಅಧಿಕಾರ ಇಲ್ಲ. ನಾನು ಐದು ಬಾರಿ ಶಾಸಕನಾದವನು ನನಗೆ ಅದರ ಬಗ್ಗೆ ಗೊತ್ತಿದೆ. ಅದು ಗ್ರಾಮ ಸಭೆಯಲ್ಲಿ ನಿರ್ಧಾರವಾಗುವಂತಾದು, ಅದು ಪಂಚಾಯತದ ಆಡಳಿತ ಮಂಡಳಿಯವರಿಗೆ ಇರುವ ಅಧಿಕಾರ ಎಂದು ತಿಳಿಸಿದರು.
ಕಳೆದ ಎರಡೂವರೆ ವರ್ಷದಲ್ಲಿ ತಾಲೂಕಿಗೆ ಒಂದೇ ಒಂದು ಮನೆ ಬಂದಿಲ್ಲ, ನನ್ನ ಅವಧಿಯಲ್ಲಿ ೬ ಸಾವಿರ ಮನೆಗಳನ್ನು ತರಿಸಿದ್ದೇನೆ. ೧೯೧೮ರಲ್ಲಿ ಕೊನೆ ಹಂತದಲ್ಲಿ ೨ಸಾವಿರ ಮನೆ ಮಂಜೂರುಗೊಳಿಸಿದ್ದೆ. ಅದರಲ್ಲಿ ೫೦೦ ಮನೆಗಳಿಗೆ ಹಣ ಬಂದಿದೆ. ಅದನ್ನು ಹಂಚಿಕೆ ಮಾಡಿದ್ದೇನೆ. ೧೫೦೦ ಮನೆ ಉಳಿದಿದೆ. ಅದನ್ನು ಈಗಿನ ಶಾಸಕರು ಹಂಚುತ್ತೇನೆ ಎಂದು ಹೇಳುತ್ತಾರೆ. ಅದಕ್ಕೆ ಹಣ ಬಂದಿಲ್ಲ, ಸರಕಾರದಲ್ಲಿ ಹಣ ಇಲ್ಲ. ಯಾವುದೇ ಕಾರ್ಯಕ್ರಮಗಳಿಲ್ಲ, ಖಜಾನೆ ಖಾಲಿಯಾಗಿದೆ. ನಾನು ತಾಲೂಕಿಗೆ ರೂ.೩೦೦-೩೫೦ ಕೋಟಿ ಅನುದಾನ ತರಿಸಿದ್ದು, ಅದರ ಶಿಲ್ಯಾಸ ಮಾಡಿದ್ದೇನೆ. ಈಗಿನ ಶಾಸಕರು ಅದನ್ನು ತಂಡು, ತುಂಡು ಮಾಡಿ ಹಂಚಿಕೆ ಮಾಡಿ ನಾನು ತರಿಸಿದ್ದು, ಎಂದು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.
ನೀತಿ ಸಂಹಿತೆ ಜಾರಿಯಲ್ಲಿದ್ದರೂ, ನಿನ್ನೆಯಿಂದ ಒಂದು ಕಡೆ ಗುಂಡಿ ತೋಡಿ ಶಿಲಾನ್ಯಾಸ ಮಾಡುತ್ತಿದ್ದಾರೆ. ಇಲಾಖೆಗೆ ಕೇಳಿದರೆ ಯಾರಿಗೂ ಗೊತ್ತಿಲ್ಲ. ನೀತಿ ಸಂಹಿತೆ ಜಾರಿಯಾದ ನಂತರ ಕೊಯ್ಯೂರುನಲ್ಲಿ ಎರಡು ಕಡೆ ಶಿಲಾನ್ಯಾಸ ನಡೆದಿದೆ. ಕೆಲವು ಕಡೆ ಕಾಮಗಾರಿ ನಡೆಯುತ್ತಿದೆ. ಅವರ ಸರಕಾರ ಇದೆ. ಎಂ.ಪಿ ಇದ್ದಾರೆ, ಎಂ.ಎಲ್.ಸಿ ಇದ್ದಾರೆ ಎಲ್ಲರೂ ಸೇರಿಕೊಂಡು ಏನೂ ಬೇಕಾದರೂ ಶಾಸಕರು ಮಾಡಿದರೆ, ವಿರೋಧ ಪಕ್ಷದವರು ಯಾವ ರೀತಿ ಚುನಾವಣೆ ಎದುರಿಸಬೇಕು, ವಿರೋಧ ಪಕ್ಷದವರಿಗೆ ರಕ್ಷಣೆ ಕೊಡುವವರು ಯಾರು, ಎಲ್ಲಾ ಕಡೆ ದಮ್ಕಿ ಹಾಕಿ, ಬಲತ್ಕಾರ ಮಾಡುವಂತದ್ದು, ವ್ಯಾನ್ನಲ್ಲಿ ಸೀರೆ ಹಂಚುವಂತದು ನಡೆಯುತ್ತಿದೆ. ದ.ಕ ಜಿಲ್ಲೆಯಲ್ಲಿ ಅತಿ ಹೆಚ್ಚು ತೊಂದರೆ ಅನುಭವಿಸುವಂತದ್ದು ಬೆಳ್ತಂಗಡಿ ಕ್ಷೇತ್ರದಲ್ಲಿ ಎಲ್ಲ ವಿದ್ಯಾಮಾನವನ್ನು ಅಧಿಕಾರಿಗಳು, ಡಿ.ಸಿ, ಎಸ್.ಪಿಯವರ ಗಮನ್ನಕ್ಕೂ ತಂದಿದ್ದೇನೆ ಎಂದು ಬಂಗೇರ ಹೇಳಿದರು. ನಮಗೆ ನ್ಯಾಯ ಸಿಗುತ್ತದೆ ಎಂದು ಹೇಳಲು ಬರುವುದಿಲ್ಲ, ಈಗ ದುಡ್ಡೆ ದೊಡ್ಡಪ್ಪ ಎಂಂತಾಗಿದೆ. ತಾಲೂಕಿನಲ್ಲಿ ನೆರೆ ಬಂದು ಎಲ್ಲಾ ಹಣ ಸ್ವಹಾ ಮಾಡಿ ಈಗ ಹಂಚುವ ಕೆಲಸ ಆಗುತ್ತಿದೆ. ನಾನು ಬ್ಯಾಂಕಿನಲ್ಲಿ ಇಟ್ಟ ಹಣದ ಲೆಕ್ಕ ಕೇಳಿದಲ್ಲ, ನೂರಿನ್ನೂರು ಲೋಡು ಅಕ್ಕಿ, ಜಿನಸು ಸಾಮಾಗ್ರಿ ಸ್ವಲ್ಪ ಹಂಚಿ ಉಳಿದುದ್ದನ್ನು ಮಾರಾಟ ಮಾಡಿದ್ದಾರೆ, ಅದರ ಲೆಕ್ಕ ಕೊಡಿ ಎಂದು ಕೇಳಿದರೆ ಅದನ್ನು ಕೊಡುತ್ತಿಲ್ಲ, ಈಗ ಶೇ ೧೫ ಪರ್ಷೆಂಟ್ ವಸೂಲಿಯಿಂದ ಈ ರೀತಿಯ ಕರುಬಾರು ನಡೆಯುತಿದೆ. ದುಡ್ಡಿನ ಕಟ್ಟನ್ನೇ ಬಿಸಾಡುತ್ತಿದ್ದಾರೆ. ನಮ್ಮ ಬಡ ಕಾರ್ಯಕರ್ತರು ಸಿಕ್ಕದ ಕೂಡಲೇ ಸುಮ್ಮನಾಗುತ್ತಾರೆ. ದುಡ್ಡಿನ ಮಳೆ ನಮ್ಮ ತಾಲುಕಿನಲ್ಲಿ ಹರಿಯತ್ತಾ ಇದೆ ಎಂದು ಅಪಾದಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಉಭಯ ಘಟಕಗಳ ಅಧ್ಯಕ್ಷರುಗಳಾದ ಶೈಲೇಶ್ ಕುಮಾರ್ ಕುರ್ತೋಡಿ, ರಂಜನ್ ಜಿ. ಗೌಡ, ನಾಯಕರುಗಳಾದ ಚಂದು ಎಲ್, ದಯಾನಂದ ಬೆಳಾಲು, ಉಪಸ್ಥಿತಿ ಇದ್ದರು.