ಮುಂಡಾಜೆ: ಉದ್ಯೋಗ ನೈಪುಣ್ಯ ಶಿಬಿರ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮುಂಡಾಜೆ:  ಸಿಎ ಬ್ಯಾಂಕ್ ಮುಂಡಾಜೆ ಇದರ ಶತಮಾನೋತ್ಸವ ಅಂಗವಾಗಿ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು, ಗ್ರಾಮ ವಿಕಾಸ ಸಮಿತಿ ಮುಂಡಾಜೆ ಮಂಗಳೂರು ವಿಭಾಗ, ಸಹಕಾರ ಭಾರತಿ ದಕ್ಷಿಣ ಕನ್ನಡ ಜಿಲ್ಲೆ ,ವಿವೇಕಾನಂದ ಪಾಲಿಟೆಕ್ನಿಕ್ ಪುತ್ತೂರು ಇವುಗಳ ಜಂಟಿ ಆಶ್ರಮದಲ್ಲಿ ನಡೆಯುತ್ತಿರುವ ಉದ್ಯೋಗ ನೈಪುಣ್ಯ ಶಿಬಿರದ ಉದ್ಘಾಟನಾ ಸಮಾರಂಭ ಡಿ.18ರಂದು ಮುಂಡಾಜೆ ಶಿಕ್ಷಣ ಸಂಸ್ಥೆಗಳ ವಠಾರದಲ್ಲಿ ಪದವಿಪೂರ್ವ ಕಾಲೇಜು ಸಭಾಭವನದಲ್ಲಿ ನಡೆಯಿತು.

 ಗ್ರಾಮ ವಿಕಾಸ ಸಮಿತಿ ಮಂಗಳೂರು ವಿಭಾಗದ ಸಾಮರಸ್ಯ ಪ್ರಮುಖ್ ಸುರೇಶ್ ಪರ್ಕಳ ಮಾತನಾಡಿ ,ಯುವಕರು ತಮ್ಮ ಗುರಿಯನ್ನು ನಿಶ್ಚಯಿಸಿ ದೃಢವಾಗಿ ಸಾಗಿ,ಸ್ವಾವಲಂಬಿಗಳಾಗಿ ಆತ್ಮ ನಿರ್ಭರ ಭಾರತದ ಕನಸನ್ನು ಸಾಕಾರಗೊಳಿಸಬೇಕೆಂದು ಕರೆ ನೀಡಿದರು. ವಿವೇಕಾನಂದ ಪಾಲಿಟೆಕ್ನಿಕ್ ಪುತ್ತೂರು ಇದರ ಪ್ರಾಂಶುಪಾಲ  ಗೋಪಿನಾಥ ಶೆಟ್ಟಿ. ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ನಿರ್ದೇಶಕ ಡಾ. ವಾಮನ ಪೈ, ಸಹಕಾರ ಭಾರತಿ ಬೆಳ್ತಂಗಡಿ ಸಂಘಟನಾ ಕಾರ್ಯದರ್ಶಿ ರಾಜೇಶ್ ಪೆರ್ಮುಡ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಸಿಎ ಬ್ಯಾಂಕ್ ಮುಂಡಾಜೆ  ಅಧ್ಯಕ್ಷ ಜನಾರ್ಧನ ಗೌಡ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಆರ್ ಎಸ್ ಎಸ್ ತಾಲೂಕು ಸಂಘ ಪ್ರಮುಖ್ ವಿನಯಚಂದ್ರ , ಮುಂಡಾಜೆ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಶ್ರೀನಿವಾಸ ರಾವ್ ಕಲ್ಮಂಜ, ಪರಶುರಾಮ ದೇವಸ್ಥಾನದ ಅಡೂರು ವೆಂಕಟರಾವ್, ಹಿರಿಯ ಸಹಕಾರಿ ಧುರೀಣ ಸಿಎ ಬ್ಯಾಂಕ್ ಮಾಜಿ ಅಧ್ಯಕ್ಷ ಎನ್ ಎಸ್ ಗೋಖಲೆ ಉಪಸ್ಥಿತರಿದ್ದರು.

ಜಿಲ್ಲಾ ಪಂಚಾಯತ್ ಸದಸ್ಯ ಕೊರಗಪ್ಪ ನಾಯ್ಕ ಅತಿಥಿಗಳಿಗೆ ಸ್ಮರಣಿಕೆ ನೀಡಿದರು. ಕಾರ್ಯಕ್ರಮದ ಆರಂಭದಲ್ಲಿ ಇತ್ತೀಚೆಗೆ ನಿಧನರಾದ ಗ್ರಾಮ ವಿಕಾಸ ಸಮಿತಿ ಮಂಗಳೂರು ವಿಭಾಗದ ಸಂಯೋಜಕ ಹಾಗೂ ಈ ಕಾರ್ಯಕ್ರಮದ ರೂವಾರಿ ದಿ.ವೆಂಕಟರಮಣ ಹೊಳ್ಳ ಇವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.

ಸಿಎ ಬ್ಯಾಂಕ್ ಮುಂಡಾಜೆ ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾರಾಯಣ ಫಡ್ಕೆ ಸ್ವಾಗತಿಸಿ,ಗ್ರಾಮ ವಿಕಾಸ ಸಮಿತಿ ಮುಂಡಾಜೆ ಸದಸ್ಯ ಪುರುಷೋತ್ತಮ ಶೆಟ್ಟಿ ವಂದಿಸಿ, ಉಪಾಧ್ಯಕ್ಷ ಕೆ ಪ್ರಕಾಶ್ ನಾರಾಯಣ ರಾವ್ ಕಾರ್ಯಕ್ರಮ ನಿರೂಪಿಸಿದರು.

ಡಿ.18 ರಿಂದ 23ವರೆಗೆ ನಡೆಯಲಿರುವ ಈ ಶಿಬಿರದಲ್ಲಿ ಸುಮಾರು 150 ಮಂದಿ ಶಿಬಿರಾರ್ಥಿಗಳು ತರಬೇತಿಯನ್ನು ಪಡೆಯಲಿದ್ದಾರೆ. ಶಿಬಿರದಲ್ಲಿ ಫ್ಯಾಶನ್ ಡಿಸೈನಿಂಗ್ ,ಜೇನು ಕೃಷಿ ,ಕೃಷಿ ಮತ್ತು ಕಸಿ ಕಟ್ಟುವುದು ಹಾಗೂ ಹೈನುಗಾರಿಕೆ, ಕೃಷಿ ಯಂತ್ರೋಪಕರಣ ,ಫುಡ್ ಮತ್ತು ಟೆಕ್ನಾಲಜಿ ಮುಂತಾದ ವಿಭಾಗಗಳಲ್ಲಿ ತರಬೇತಿ ನೀಡಲಾಗುತ್ತದೆ

Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.