ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ

ರೂ.1.02ಕೋಟಿ ನಿವ್ವಳ ಲಾಭ;ಸದಸ್ಯರಿಗೆ ಶೇ.10ಡಿವಿಡೆಂಡ್ ಘೋಷಣೆ

 ಧರ್ಮಸ್ಥಳ: ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2019-20 ನೇ ಸಾಲಿನ ವಾರ್ಷಿಕ ಮಹಾಸಭೆಯು ಡಿ.19 ರಂದು ಸಂಘದ ಸಾಧನಾ ಕಟ್ಟಡದ ಅಟಜಿ ಸಭಾ ಭವನದಲ್ಲಿ ಜರುಗಿತು
ಸಂಘದ ಅಧ್ಯಕ್ಷ ಹರಿದಾಸ ಗಾಂಭೀರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘವು ಆರ್ಥಿಕ ವರ್ಷದಲ್ಲಿ ರೂ.1.02ಕೋಟಿ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.10ಡಿವಿಡೆಂಡ್ ಘೋಷಿಸಿದರು.


ಸಂಘದ ಉಪಾಧ್ಯಕ್ಷ ಶ್ರೀಪತಿ ಹೆಬ್ಬಾರ್ ಎಂ, ನಿರ್ದೇಶಕರುಗಳಾದ ಜಯರಾಂ ಭಂಡಾರಿ ಯಂ, ಚಂದನ್‌ಪ್ರಸಾದ್ ಕಾಮತ್, ರಘುಚಂದ್ರ ರಾವ್ ಪಿ, ಪೀತಮ್ ಡಿ, ಅಜಿತ್ ಕುಮಾರ್ ಜೈನ್, ಶ್ರೀಮತಿ ಆಶಾ ಸದಾಶಿವ, ಶ್ರೀಮತಿ ಶಾಂಭವಿ ರೈ, ಶ್ರೀಮತಿ ಸುಮಂಗಳಾ, ಉಮಾನಾಥ, ಶೀನ, ವಲಯ ಮೇಲ್ವಿಚಾರಕ ಸಂದೇಶ್ ಕುಮಾರ್ ಹಾಗೂ ಸಂಘದ ಸರ್ವ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಸಂಘದ ಹಿರಿಯ ಸದಸ್ಯರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರನ್ ಡಿ 2019-20ನೇ ವರ್ಷದ ಆಡಳಿತ ವರದಿ ವಾಚಿಸಿದರು. ಸಿಬ್ಬಂದಿವರ್ಗ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.