ಅಳದಂಗಡಿ: ಇತಿಹಾಸ ಪ್ರಸಿದ್ಧ ತುಳುನಾಡಿನ ಭವ್ಯ ಪರಂಪರೆ ಅಳದಂಗಡಿ ಅಜಿಲ ಸೀಮೆಯ ಪಟ್ಟದ ಕಂಬಳ ಕೋರಿ ಆಚರಣೆಯು ನಡೆಯಿತು.
ಈ ಸಂದರ್ಭದಲ್ಲಿ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮ ಪ್ರಸಾದ್ ಅಜಿಲರು, ಅಜಿಲ ಸೀಮೆಗೆ ಸಂಬಂಧ ಪಟ್ಟ ಗುರಿಕಾರರು, ಊರವರು ಉಪಸ್ಥಿತರಿದ್ದರು. ಪಿಲಿಚಾಮುಂಡಿ ದೈವದ ಮುಂದೆ ಹೂವಿನ ಬಂಡಿಯನ್ನು ಎಳೆಯುವ ( ಪೂಂಕರೆ) ಧಾರ್ಮಿಕ ಆಚರಣೆಗಳನ್ನು ನೆರವೇರಿಸಲಾಯಿತು.