ಸದಸ್ಯರಿಗೆ ಶೇ.24 ಡಿವಿಡೆಂಡ್ ಘೋಷಣೆ
ಬೆಳ್ತಂಗಡಿ : ಬೆಳ್ತಂಗಡಿ ಕಥೊಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಇದರ ವಾರ್ಷಿಕ ಮಹಾಸಭೆಯು ಡಿ. 19ರಂದು ಬೆಳ್ತಂಗಡಿ ಹೊಲಿ ರೆಡಿಮಾರ್ ಆಡಿಟೋರಿಯಂ ನಲ್ಲಿ ಜರಗಿತು.
ಸಂಘದ ಅಧ್ಯಕ್ಷ ಎಲೋಸಿಯಸ್ ಲೋಬೊ ಅಧ್ಯಕ್ಷತೆ ವಹಿಸಿ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭ ಉಪಾಧ್ಯಕ್ಷ ಜೋನ್ ಆರ್ವಿನ್ ಡಿಸೋಜಾ, ಅಲ್ಫೋನ್ಸ್ ಫ್ರಾಂಕೋ, ಲಾರೆನ್ಸ್ ಡೇಸಾ, ಲಾರೆನ್ಸ್ ಡಿಸೋಜಾ, ರುಡಾಲ್ಫ್ ಡಿಸೋಜಾ, ಜೋಕಿಮ್ ಕ್ರಾಸ್ತ, ಜೋಸೆಫಿನ್ ಪಿಂಟೋ, ಆಗ್ನೆಸ್ ಜೂಲಿಯಾನಾ ಬರ್ಬೋಜ, ವಿನ್ಸೆಂಟ್ ರೊಡ್ರಿಗಸ್, ಸಂಘದ ಸರ್ವ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.
ಮುಖ್ಯ ಕಾರ್ಯನಿರ್ವಣಾಧಿಕಾರಿ ಐವನ್ ಗೊನ್ಸಾಲ್ವಿಸ್ ವಾರ್ಷಿಕ ವರದಿ ಮಂಡಿಸಿದರು, ಸಿಬ್ಬಂದಿ ವರ್ಗದವರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.