ಗುರುವಾಯನಕೆರೆ ವಿಕಾಸ ವಿವಿಧೋದ್ದೇಶ ಸಹಕಾರಿ ಸಂಘದ ಮಹಾಸಭೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ರೂ.3.17 ಕೋಟಿ ವ್ಯವಹಾರ: ಸದಸ್ಯರಿಗೆ ಶೇ.18 ಡಿವಿಡೆಂಡ್ ಘೋಷಣೆ

ಬೆಳ್ತಂಗಡಿ: ವಿಕಾಸ ವಿವಿಧೋದ್ದೇಶ ಸಹಕಾರಿ ಸಂಘ ಗುರುವಾಯನಕೆರೆ ಇದರ 2019-20ನೇ ಸಾಲಿನ ವಾರ್ಷಿಕ ಮಹಾಸಭೆಯು ಡಿ.19ರಂದು ಗುರುವಾಯನಕೆರೆ ವಿಕಾಸ ಸದನದಲ್ಲಿ ಜರುಗಿತು.
ಸಂಘದ ಅಧ್ಯಕ್ಷ ಎಲೋಸಿಯಸ್ ಡಿಸೋಜಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘವು 2019-20ನೇ ಸಾಲಿನ ಆರ್ಥಿಕ ವರ್ಷದಲ್ಲಿ ರೂ.26.68 ಕೋಟಿ ಠೇವಣಿ ಹೊಂದಿದ್ದು,21.60 ಕೋಟಿ ಸದಸ್ಯರಿಗೆ ಸಾಲ ನೀಡಿದೆ. ರೂ.3.17ಕೋಟಿ ವೃದ್ಧಿ ಹೊಂದಿದ್ದು ಶೇ.17.2ರ ಪ್ರಗತಿ ಸಾಧಿಸಿದೆ. ಕೋವಿಡ್-19 ಸಂಕಷ್ಟದ ಸಮಯದಲ್ಲಿ ಕೊಂಚ ಹಿನ್ನಡೆಯನ್ನು ಅನುಭವಿಸಿದ್ದು, ಸಂಘದ ಸದಸ್ಯರ ಹಿತದೃಷ್ಟಿಯಿಂದ ಸದಸ್ಯರುಗಳಿಗೆ ಶೇ. 18 ಡಿವಿಡೆಂಡ್ ನೀಡುವುದಾಗಿ ಘೋಷಿಸಿದರು.

ಸಂಘದ ಉಪಾಧ್ಯಕ್ಷ ಯೋಗೀಶ ಪೈ, ನಿರ್ದೇಶಕರುಗಳಾದ ಮೋಹನ್ ಹೆಗ್ಡೆ, ರಾಜೇಂದ್ರ ನಾಯರ್, ಗೋಪಿನಾಥ ನಾಯಕ್, ಅಂತೋನಿ ಪಾಯಿಸ್, ರಾಘವ ಶೆಟ್ಟಿ ಕೆ, ಗ್ರೆಗೊರಿ ಡಿ’ಮೆಲ್ಲೊ, ಗೋಪಾಲಕೃಷ್ಣ, ಪ್ರವೀಣ್ ಕುಮಾರ್ ಹೆಚ್.ಎಸ್, ಜಗದೀಶ್, ಶೇಖರ ನಾಯ್ಕ, ಶ್ರೀಮತಿ ಮಮತಾ ಎಂ ಶೆಟ್ಟಿ, ಪ್ರೇಮಾವತಿ ಭಟ್ ಹಾಗೂ ಸಂಘದ ಸರ್ವ ಸದಸ್ಯರು, ಸಿಬ್ಬಂದಿ ವರ್ಗ ಸಭೆಯಲ್ಲಿ ಭಾಗವಹಿಸಿದ್ದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಅನಿತಾ ಫೆರ್ನಾಂಡಿಸ್ ಆರ್ಥಿಕ ವರ್ಷದ ವರದಿ ವಾಚಿಸಿದರು. ನಿರ್ದೇಶಕ ಅಲ್ವಿನ್ ಮೋನಿಸ್ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.