ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಮಹಾಸಭೆ

ಬೆಳ್ತಂಗಡಿ: ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘ ಕೇಂದ್ರ ಕಛೇರಿ ಬೆಳ್ತಂಗಡಿ ಇದರ 2019-20 ನೇ ಸಾಲಿನ ವಾರ್ಷಿಕ ಮಹಾಸಭೆಯು ಡಿ.19ರಂದು ಬೆಳ್ತಂಗಡಿ ಶ್ರೀ ನಾರಾಯಣ ಗುರು ವಾಣಿಜ್ಯ ಸಂಕೀರ್ಣದ ಸಭಾಭನದಲ್ಲಿ ಜರುಗಿತು.
ಸಂಘದ ಅಧ್ಯಕ್ಷ ಎನ್ ಪದ್ಮನಾಭ ಮಾಣಿಂಜ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘವು ದ.ಕ ಮತ್ತು ಉಡುಪಿ ಜಿಲ್ಲೆಯಾದ್ಯಂತ 12 ಶಾಖೆಗಳನ್ನೊಳಗೊಂಡಿದೆ. ಕೋವಿಡ್ -19 ಸಂಕಷ್ಟದ ಸಮಯದಲ್ಲೂ ನಮ್ಮ ಸಹಕಾರ ಸಂಘವು ಕಾರ್ಯದಕ್ಷತೆಯನ್ನು ಮೆರೆದು ತನ್ನ ಸದಸ್ಯ ಮಿತ್ರರಿಗೆ ಬ್ಯಾಂಕಿಂಗ್ ಸೌಲಭ್ಯವನ್ನು ನೀಡಿದೆ.
2019-20ನೇ ಸಾಲಿನ ಆರ್ಥಿಕ ವರ್ಷದಲ್ಲಿ ರೂ. 60.44 ಕೋಟಿ ಬಂಡವಾಳವನ್ನು ಹೊಂದಿದ್ದು, 22000ಕ್ಕೂ ಮೇಲ್ಪಟ್ಟು ಸದಸ್ಯ ಬಲ ಹೊಂದಿರುತ್ತದೆ. ರೂ 54.80ಕೊಟಿ ಠೇವಣಿಯೊಂದಿಗೆ ರೂ. 44.55 ಕೋಟಿ ಸಾಲ ನೀಡಿದ್ದು, ರೂ.425 ಕೋಟಿ ವ್ಯವಹಾರ ನಡೆಸಿದೆ. ವರದಿ ವರ್ಷದಲ್ಲಿ ರೂ.1.04 ಕೋಟಿ ನಿವ್ವಳ ಲಾಭವನ್ನು ಗಳಿಸಿದ್ದು, ಸದಸ್ಯರಿಗೆ ಶೇ.15 ಡಿವಿಡೆಂಡ್ ನೀಡುವುದಾಗಿ ಘೋಷಿಸಿದರು.
ಸಂಘದ ಉಪಾಧ್ಯಕ್ಷ ದಾಮೋದರ ಸಾಲ್ಯಾನ್, ನಿರ್ದೇಶಕರುಗಳಾದ ಕೆ ವಸಂತ ಬಂಗೇರ, ಕೆ ಹರೀಶ್ ಕುಮಾರ್. ಭಗೀರಥ ಜಿ, ಸುಜಿತಾ ವಿ ಬಂಗೇರ, ತನುಜಾ ಶೇಖರ್, ಸಂಜೀವ ಪೂಜಾರಿ, ಕೆ.ಪಿ ದಿವಾಕರ, ಜನಾರ್ದನ ಪೂಜಾರಿ, ಜಗದೀಶ್ಚಂದ್ರ ಡಿಕೆ, ಶೇಖರ್ ಬಂಗೇರ, ಸತೀಶ್ ಕಾಶಿಪಟ್ಣ, ಚಂದ್ರಶೇಖರ, ಧರ್ಣಪ್ಪ ಪೂಜಾರಿ, ವಿಶೇಷ ಅಧಿಕಾರಿ ಎಂ ಮೋನಪ್ಪ ಪೂಜಾರಿ, 12 ಶಾಖೆಗಳ ವ್ಯವಸ್ಥಾಪಕರು, ಸಿಬ್ಬಂದಿ ವರ್ಗ ಹಾಗೂ ಸಂಘದ ಸರ್ವ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವಥ್ ಕುಮಾರ್ ವರದಿ ವಾಚಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.