ಉಜಿರೆ ಬಾಲಕನ ಅಪಹರಣ: ಪತ್ತೆಯಾಗದ ಸುಳಿವು; ಅಪಹರಣಗಾರರಿಂದ ರೂ.10 ಕೋಟಿ ಬೇಡಿಕೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಉಜಿರೆ: ಉಜಿರೆಯ ರಥಬೀದಿ ನಿವಾಸಿ, ಖ್ಯಾತ ಉದ್ಯಮಿ ಬಿಜೋಯ್ ಯವರ ೮ವರ್ಷದ ಪ್ರಾಯದ ಪುತ್ರ ಅನುಭವ್ ರವರನ್ನು ನಿನ್ನೆ ಸಂಜೆ(ಡಿ.17) ಮನೆಯಂಗಳದಿಂದ ಸಿನಿಮೀಯ ಮಾದರಿಯಲ್ಲಿ ಅಪಹರಿಸಲಾಗಿದ್ದು, ಅಪಹರಣಗಾರರ ಸುಳಿವು ಇನ್ನೂ ಲಭ್ಯವಾಗಿಲ್ಲ. ಆದರೆ ಅಪಹರಣಗಾರರು ಬಾಲಕನ ಬಿಡುಗಡೆಗೆ ರೂ.10 ಕೋಟಿ ಹಣದ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.
ಮನೆಯ ಗೇಟಿನ ಬಳಿ ಆಟವಾಡುತ್ತಿದ್ದ ಅನುಭವ್ ರವರನ್ನು ಇಂಡಿಕಾ ಕಾರಿನಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ಅಪಹರಿಸಿದ್ದು, ಈ ಸಂದರ್ಭ ಬಾಲಕನ ತಾತ ಶಿವನ್ ರವರು ಓಡಿ ಬಂದು ಕಾರಿನ ಬಾಗಿಲು ತೆರೆಯಲು ಯತ್ನಿಸುತ್ತಿದ್ದಂತೆ ಅಪಹರಣಗಾರರು ಕಾರು ಚಲಾಯಿಸಿಕೊಂಡು ರಥಬೀದಿ ಮೂಲಕ ಚಾರ್ಮಾಡಿ ಕಡೆ ತೆರಳಿದ್ದರೆನ್ನಲಾಗುತ್ತಿದೆ.

ಸ್ಥಳಕ್ಕೆ ದ.ಕ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ಭೇಟಿ ನೀಡಿ ಪರಿಶೀಲನೆ

ಶಿವನ್ ಅವರ ಸೊಸೆಗೆ ಅಪಹರಣಾಗಾರರು ಫೋನ್ ಮಾಡಿ ಮಗುವನ್ನು ಬಿಡಿಸಲು 100 ಬಿಟ್ ಕಾಯಿನ್ ಅಂದರೆ ರೂ.17 ಕೋಟಿ ಬೇಡಿಕೆ ಇಟ್ಟಿದ್ದರೆಂದು ಶಿವನ್ ರವರು ಬೆಳ್ತಂಗಡಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಬೆಳ್ತಂಗಡಿ ಪೊಲೀಸರು ತೀವ್ರ ಹುಡುಕಾಟದಲ್ಲಿ ನಿರತರಾಗಿದ್ದು, ಅಪಹರಣಗಾರರು ಹಣದ ಬೇಡಿಕೆಯನ್ನು  ರೂ.10 ಕೋಟಿಗೆ ಇಳಿಸಿದ್ದಾರೆ.

 

ಉಜಿರೆ ಉದ್ಯಮಿ ಬಿಜೋಯ್ ಯವರ ಮನೆ

ಸ್ಥಳಕ್ಕೆ ದ.ಕ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ಹಾಗೂ ಬಂಟ್ವಾಳ ವಿಭಾಗದ ಡಿವೈಎಸ್ಪಿ  ವೆಲೆಂಟೈನ್ ಡಿ’ಸೋಜ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.