ಬೆಳ್ತಂಗಡಿ ತಾಲೂಕು ಔಷಧ ವ್ಯಾಪಾರಸ್ಥರ ಸಂಘ: ಅಧ್ಯಕ್ಷರಾಗಿ ಜಗದೀಶ ಡಿ ಪುನರಾಯ್ಕೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಔಷಧ ವ್ಯಾಪಾರಸ್ಥರ ಸಂಘದ ವಾರ್ಷಿಕ ಸಭೆ ಡಿ.11ರಂದು ಸಂಘದ ಅಧ್ಯಕ್ಷ ಜಗದೀಶ್ ಡಿ. ಇವರ ಅಧ್ಯಕ್ಷತೆಯಲ್ಲಿ ಬೆಳ್ತಂಗಡಿಯಲ್ಲಿ ಜರುಗಿತು. ಸಭೆಯಲ್ಲಿ ಬೆಳ್ತಂಗಡಿ ತಾಲೂಕು ಔಷಧ ವ್ಯಾಪಾರಸ್ಥರ ಸಂಘದ ಸ್ಥಾಪಕ ಅಧ್ಯಕ್ಷರಾಗಿ ಸಂಘವನ್ನು 12 ವರ್ಷಗಳಿಂದ ಅಧ್ಯಕ್ಷರಾಗಿ ಮುನ್ನಡೆಸುತ್ತಿರುವ ಜಗದೀಶ್ ಡಿ. ಅವರನ್ನೇ 2021-22ನೇ ಸಾಲಿನ ನೂತನ ಅಧ್ಯಕ್ಷರನ್ನಾಗಿ ಪುನರಾಯ್ಕೆ ಮಾಡಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿಗಳಾಗಿ ಭಿಡೆ ಮೆಡಿಕಲ್ಸ್ ಕಕ್ಕಿಂಜೆಯ ಸುಜೀತ್ ಭಿಡೆ, ಕೋಶಾಧಿಕಾರಿಯಾಗಿ ಅಮರ್‌ಡ್ರಗ್ ಹೌಸ್ ಬೆಳ್ತಂಗಡಿಯ ಮಾಲಕ ಗಣಪತಿ ಭಟ್ ಪುನರಾಯ್ಕೆಗೊಂಡಿದ್ದಾರೆ.
ಕಾರ್ಯದರ್ಶಿಗಳಾಗಿ ಬೆಸ್ಟ್ ಮೆಡಿಕಲ್ಸ್ ಗೇರುಕಟ್ಟೆಯ ರಮೇಶ್, ಮೆಡಿಕೇರ್ ಮೆಡಿಕಲ್ಸ್ ಕಕ್ಕಿಂಜೆಯ ದಿನೇಶ್, ಅಶ್ವಿನಿ ಮೆಡಿಕಲ್ಸ್ ಬೆಳ್ತಂಗಡಿಯ ಚಂದ್ರಶೇಖರ್, ಮಹಾವೀರ ಮೆಡಿಕಲ್ಸ್ ಮಡಂತ್ಯಾರಿನ ಉದಯ ಕುಮಾರ್, ವಿನಯ ಮೆಡಿಕಲ್ಸ್ ಅಳದಂಗಡಿಯ ರಘುನಾಥ ದಾಮ್ಲೆ, ಸುರಕ್ಷಾ ಮೆಡಿಕಲ್ಸ್ ಉಜಿರೆಯ ಶ್ರೀಧರ ಕೆ.ವಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಜಗದೀಶ್ ಡಿ. ಸ್ವಾಗತಿಸಿದರು. ವಾರ್ಷಿಕ ಲೆಕ್ಕಪತ್ರವನ್ನು ಕೋಶಾಧಿಕಾರಿ ಗಣಪತಿ ಭಟ್ ಮಂಡಿಸಿದರು. ವಾರ್ಷಿಕ ವರದಿಯನ್ನು ಪ್ರಧಾನ ಕಾರ್ಯದರ್ಶಿ ಸುಜಿತ್ ಭಿಡೆಯವರು ವಾಚಿಸಿ, ಕೊನೆಯಲ್ಲಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.