ಬೆಳ್ತಂಗಡಿ: ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘ ಬೆಂಗಳೂರು ಇದರ ಬೆಳ್ತಂಗಡಿ ಶಾಖೆಯ ಕಾರ್ಯಕಾರಿ ಸಮಿತಿಗೆ ಡಿ.15ರಂದು ಚುನಾವಣೆ ನಡೆಯಿತು. ಬೆಳ್ತಂಗಡಿ ತಾಲೂಕು ಶಾಖೆಗೆ ಮೂರು ವಿವಿಧ ಗುಂಪುಗಳ ನೇತೃತ್ವದಲ್ಲಿ 12 ಸ್ಥಾನಗಳ ಪೈಕಿ 8 ಪುರುಷ ಕ್ಷೇತ್ರಕ್ಕೆ 24 ಮಂದಿ, 4 ಮಹಿಳಾ ಕ್ಷೇತ್ರಕ್ಕೆ 11 ಮಂದಿ ಸೇರಿದಂತೆ ಒಟ್ಟು 35 ಮಂದಿ ಸ್ಪರ್ಧಿಸಿದ್ದರು.
ಆಯ್ಕೆಯಾದವರ ವಿವರ:
ಪುರುಷ ಕ್ಷೇತ್ರದಿಂದ ಕಿಶೋರ್ ಕುಮಾರ್, ಹೆಚ್.ಕೆ. ದೇವನಾರಿ ಹಿ.ಪ್ರಾ ಶಾಲೆ ಬಂಗಾಡಿ, ಕಿರಣ್ ಕುಮಾರ್ ಕೆ.ಎಸ್, ಕರಂಬಾರು ಸ.ಹಿ.ಪ್ರಾ. ಶಾಲೆ, ಸುರೇಶ್ ಎಂ ಮಾಚಾರು, ಕುಂಟಾಲಪಲ್ಕೆ ಸ.ಹಿ.ಪ್ರಾ ಶಾಲೆ, ರಘಪತಿ ಕೆ ರಾವ್, ಕುದ್ರಡ್ಕ ಸ.ಹಿ.ಪ್ರಾ.ಶಾಲೆ, ಲೋಕೇಶ ಜಿ ಕುಂಟಿನಿ, ಸ.ಹಿ.ಪ್ರಾ ಶಾಲೆ ಲಾಯಿಲ, ದಿನೇಶ್ ನಾಯ್ಕ ಪುತ್ತಿಲ ಸ.ಹಿ.ಪ್ರಾ.ಶಾಲೆ, ರಾಜೇಶ್ ಎನ್ ಹೊಕ್ಕಾಡಿಗೋಳಿ ಸ.ಹಿ.ಪ್ರ.ಶಾಲೆ, ಅಮಿತಾನಂದ ಹೆಗ್ಡೆ ಬಂಗಾಡಿ ಸ.ಹಿ.ಪ್ರಾ.ಶಾಲೆ.
ಮಹಿಳಾ ಕ್ಷೇತ್ರದಿಂದ ಮಂಗಳ.ಕೆ ಸ.ಹಿ.ಪ್ರಾ.ಶಾಲೆ ಬಡಗಕಾರಂದೂರು, ಜ್ಯೋತಿ ಎಂ.ಎಸ್, ಸ.ಹಿ.ಪ್ರಾ.ಶಾಲೆ ಮಾಯಾ ಬೆಳಾಲು, ಐರಿನ್ ಡೆಸಾ ಸ.ಕಿ.ಪ್ರಾ.ಶಾಲೆ ಅತ್ತಾಜೆ ಉಜಿರೆ, ಆರತಿ ರಾಜೇಂದ್ರ ಸ.ಹಿ.ಪ್ರಾ.ಶಾಲೆ ನಿಟ್ಟಡೆ ಇವರುಗಳು ಚುನಾವಣೆಯಲ್ಲಿ ಜಯಗಳಿಸಿದ್ದಾರೆ.
ಮೂರು ತಂಡಗಳಾಗಿ ಸ್ಪರ್ಧಿಸಿದ್ದ ಪೈಕಿ ಪದವೀಧರ ಸಂಘದ ಅಧ್ಯಕ್ಷ ಕಿಶೋರ್ ಕುಮಾರ್, ಕಾರ್ಯದರ್ಶಿ ರಾಜೇಶ್ ಎನ್, ತಾಲೂಕು ಎನ್.ಪಿ.ಎಸ್ ಸಂಘದ ಅಧ್ಯಕ್ಷ ಸುರೇಶ್ ಮಾಚಾರು ನೇತೃತ್ವದಲ್ಲಿ ಸ್ಪರ್ಧಿಸಿದ್ದ ಪೈಕಿ ೯ ಮಂದಿ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಘುಪತಿ ರಾವ್ ನೇತೃತ್ವದ ಬಳಗದಿಂದ ೩ ಮಂದಿ ಚುನಾಯಿತರಾಗಿದ್ದಾರೆ. ಜಿಲ್ಲಾಧ್ಯಕ್ಷ ಶಿವಶಂಕರ ಭಟ್ ನೇತೃತ್ವದಲ್ಲಿ ಸ್ಪರ್ಧಿಸಿದ್ದ ಎಲ್ಲಾ ಅಭ್ಯರ್ಥಿಗಳು ಪರಾಭವಗೊಂಡಿದ್ದಾರೆ.