ಉರುವಾಲು: ಉಂಡೆಮನೆ ಶಂಭು ಭಟ್ಟರ ಸವಿ ನೆನಪಿನ ಶಿಕ್ಷಣ ಪ್ರೋತ್ಸಾಹ ಯೋಜನೆಯ ಅಂಗವಾಗಿರುವ 26ನೇ ವರ್ಷದ ಉಂಡೆಮನೆ ಪ್ರಶಸ್ತಿಯನ್ನು ಕುಂಚಿನಡ್ಕ ಬಿ.ವಿ.ನಾರಾಯಣ ಭಟ್ಟರಿಗೆ ಡಿ.13 ರಂದು ಪ್ರದಾನ ಮಾಡಲಾಯಿತು.
ಗೋಕರ್ಣ ಸಮೀಪದ ‘ವಿಷ್ಣು ಗುಪ್ತ ವಿಶ್ವ ವಿದ್ಯಾಪೀಠ’ದ ಆವರಣದಲ್ಲಿ ಹೊಸಮಠ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರು ಇವರಿಗೆ ಪ್ರಶಸ್ತಿ ಪ್ರದಾನ ಮಾಡಿ ಹರಸಿದರು.
ಕುಂಚಿನಡ್ಕ ಬಿ.ವಿ.ನಾರಾಯಣ ಭಟ್ಟರು ಕೃಷಿಕರಾಗಿದ್ದು, ಶ್ರೀ ಸತ್ಯಸಾಯಿ ಲೋಕಸೇವಾ ಸಂಸ್ಥೆಯ ನಿವೃತ್ತ ಉದ್ಯೋಗಿಯಾಗಿದ್ದರು. ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳವರ ಮಾರ್ಗದರ್ಶನದ ಎಲ್ಲಾ ಸಮಾಜಮುಖಿ ಸೇವೆಗಳಲ್ಲಿ ತನ್ನನ್ನು ತೊಡಗಿಸಿಕೊಂಡ ಇವರ ಗುರುಸೇವೆ ಮತ್ತು ಸಮಾಜಸೇವೆಯನ್ನು ಗುರುತಿಸಿ ಈ ವರ್ಷದ ‘ಉಂಡೆಮನೆ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಯೋಜನೆಯ ಸಂಚಾಲಕ ಉಂಡೆಮನೆ ವಿಶ್ವೇಶ್ವರ ಭಟ್ಟ, ಕರ್ತ ಉಂಡೆಮನೆ ಶಂಭು ಶರ್ಮಾ ಉಪಸ್ಥಿತರಿದ್ದರು. ಪ್ರಶಸ್ತಿಯ ಜೊತೆಗೆ ನೀಡಿದ ರೂ.5005/- ಪ್ರೋತ್ಸಾಹಧನವನ್ನು ಬಿ.ವಿ.ನಾರಾಯಣ ಭಟ್ಟರು ವಿಷ್ಣು ಗುಪ್ತ ವಿಶ್ವ ವಿದ್ಯಾಪೀಠಕ್ಕೆ ದೇಣಿಗೆಯಾಗಿ ನೀಡಿದರು.