ಅಳದಂಗಡಿ: ಇತಿಹಾಸ ಪ್ರಸಿದ್ಧ ತುಳುನಾಡಿನ ಭವ್ಯ ಪರಂಪರೆ ಅಳದಂಗಡಿ ಅರಮನೆಯ 21ನೇ ಅರಸರಾಗಿ 1995ರಲ್ಲಿ ಪಟ್ಟಾಭಿಷಿಕ್ತರಾದ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲರ ಪಟ್ಟಾಭಿಷೇಕದ ರಜತಮಹೋತ್ಸವ ಸಂಭ್ರಮವು ಇತ್ತೀಚೆಗೆ ನಡೆದಿದ್ದು ಅಳದಂಗಡಿ ಅರಮನೆಯಲ್ಲಿ ಡಿ. 22ರಂದು ಸೀಮೆಯ ಪ್ರಧಾನ ದೈವಗಳಿಗೆ ಧರ್ಮನೇಮವು ನಡೆಯಲಿದೆ.
ಬೆಳಿಗ್ಗೆ ತೋರಣ ಮುಹೂರ್ತ, ಸಂಜೆ ಗಂಟೆ 3ಕ್ಕೆ ನಾವರ ಮಾಗಣೆಗುತ್ತಿನಿಂದ ಕೊಡಮಣಿತ್ತಾಯ ದೈವದ ಭಂಡಾರ ಹೊರಡುವುದು. ಸಂಜೆ 4.30ಕ್ಕೆ ಅಳದಂಗಡಿ ಶ್ರೀ ಸೋಮನಾಥೇಶ್ವರಿ ದೇವಸ್ಥಾನದಿಂದ ಮೂಜಿಲ್ನಾಯ ದೈವದ ಭಂಡಾರ ಹೊರಡುವುದು. ನಂತರ ರಾತ್ರಿ ಗಂಟೆ ೮ರಿಂದ ಕೊಡಮಣಿತ್ತಾಯ ಮತ್ತು ಮೂಜಿಲ್ನಾಯ ದೈವದ ನೇಮ ಜರಗಲಿರುವುದು. ಎಂದು ಅಳದಂಗಡಿ ಅರಮನೆಯ ಶಿವಪ್ರಸಾದ್ ಅಜಿಲರು ತಿಳಿಸಿದ್ದಾರೆ.