ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆಯು ಡಿ.16ರಂದು ಮುಂಡಾಜೆ ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದ ಸಭಾಭವನದಲ್ಲಿ ಜರಗಿತು.

ಸಂಘದ ಅಧ್ಯಕ್ಷ ಜನಾರ್ದನ ಗೌಡ ಅಧ್ಯಕ್ಷತೆ ವಹಿಸಿದ್ದರು. ವರದಿ ವರ್ಷದಲ್ಲಿ 47 ಕೋಟಿ ರೂ.ಗಿಂತ ಅಧಿಕ ಮೊತ್ತದ ಠೇವಣಿಗಳನ್ನು ಹೊಂದಿರುವ ಸಂಘವು 55 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ ವಿವಿಧ ಸಾಲಗಳನ್ನು ನೀಡಿದೆ.ಈ ವರ್ಷ ಸಂಘವು ಶತಮಾನೋತ್ಸವ ವರ್ಷವನ್ನು ಆಚರಿಸುತ್ತಿರುವುದರಿಂದ ಹೆಚ್ಚಿನ ಯೋಜನೆಗಳನ್ನು ರೂಪಿಸಿಕೊಂಡಿದ್ದು ಸದಸ್ಯರಿಗೆ ಲಾಭದಾಯಕ ಸೇವೆಗಳನ್ನು ನೀಡುವ ಗುರಿಯನ್ನು ಹೊಂದಿದೆ.
2018-19 ನೇ ಸಾಲಿನಲ್ಲಿ ಸಂಘವು 84ಲಕ್ಷ ರೂ. ಲಾಭಗಳಿಸಿದ್ದು ಸದಸ್ಯರಿಗೆ ಶೇ.10 ಡಿವಿಡೆಂಡ್ ವಿತರಿಸಲಿದೆ.
ಸಂಘದ ಉಪಾಧ್ಯಕ್ಷ ಪ್ರಕಾಶ ನಾರಾಯಣ ರಾವ್, ನಿರ್ದೇಶಕರಾದ ಕೊರಗಪ್ಪ ನಾಯ್ಕ, ಜ್ಯೋತಿ ಜೆ.ಫಡ್ಕೆ, ಶಶಿಧರ ಎಂ.ಕಲ್ಮಂಜ, ನಂದಕುಮಾರ್, ಶಶಿಧರ, ಸುಮಾ ಗೋಖಲೆ, ರಾಘವ ಕಲ್ಮಂಜ, ಶಶಿಧರ ಬಿ., ಸಂಜೀವ ಗೌಡ, ನಯನಾ, ಶಶಿಧರ ಬಿ, ವೃತ್ತಿಪರ ನಿರ್ದೇಶಕರಾದ ಎನ್. ಎಸ್.ಗೋಖಲೆ, ಗಜಾನನ ವಝೆ ಉಪಸ್ಥಿತರಿದ್ದರು.
ಸೋಮಂತಡ್ಕ ಶಾಖಾ ಮ್ಯಾನೇಜರ್ ಚಂದ್ರಕಾಂತ ಪ್ರಭು ಸ್ವಾಗತಿಸಿದರು. ಸಿಇಓ ನಾರಾಯಣ ಫಡ್ಕೆ ವರದಿ ವಾಚಿಸಿದರು. ಕಕ್ಕಿಂಜೆ ಶಾಖಾ ಮ್ಯಾನೇಜರ್ ಮಧುಕರ ರಾವ್ ಕಾರ್ಯಕ್ರಮ ನಿರೂಪಿಸಿದರು.ನೆರಿಯ ಶಾಖಾ ಮ್ಯಾನೇಜರ್ ಕರುಣಾಕರ್ ಎಂ.ಎಸ್. ವಂದಿಸಿದರು.

ಸಭೆಯ ಮುಖ್ಯಾಂಶಗಳು

+ಸಭೆಯಲ್ಲಿ ಭಾಗವಹಿಸಿದ ಪ್ರತಿ ಸದಸ್ಯರಿಗೆ ಮಾಸ್ಕ್, ಸಾಮಾಜಿಕ ಅಂತರ ಮೊದಲಾದ ಕೊರೊನಾ ಎಚ್ಚರಿಕೆಗಳು ಕಡ್ಡಾಯವಾಗಿತ್ತು.
+ಕೋವಿಡ್ ಕಾರಣ ಭೋಜನ ವ್ಯವಸ್ಥೆ ಬೆಳಿಗ್ಗೆ 10.30 ರಿಂದಲೇ ಆರಂಭಿಸಲಾಯಿತು.
+ಕೃಷಿಕರ ಸಾಲ ತಿರುವಳಿ ಯೋಜನೆಗೆ ಸಂಘದ ಪರವಾಗಿ ಶೇ.1 ಸಹಾಯಧನ ನೀಡುವುದಾಗಿ ತೀರ್ಮಾನಿಸಲಾಯಿತು.
+ಅಂತರ್ಜಲ ವೃದ್ಧಿಗೆ ಸಂಘದ ಮೂಲಕ ಹೆಚ್ಚಿನ ಒತ್ತು ನೀಡುವುದು.
+ಸೋಮಂತಡ್ಕದಲ್ಲಿ ನಿರ್ಮಿಸುತ್ತಿರುವ ಸಂಘದ ನೂತನ ಕಟ್ಟಡವನ್ನು ಶೀಘ್ರ ಲೋಕಾರ್ಪಣೆ ಗೊಳಿಸುವುದು.
+ಆತ್ಮ ನಿರ್ಭರ ಭಾರತ ಯೋಜನೆಯಡಿ ಸಂಘದ ಮೂಲಕ ಉದ್ಯೋಗ ನೈಪುಣ್ಯ ತರಬೇತಿ ನೀಡಿ ವ್ಯವಹಾರ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಗೆ ಯತ್ನ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.