ಓಡಿಲ್ನಾಳ: ಅವಧಿ ಮುಗಿದ ಗ್ರಾಮ ಪಂಚಾಯತುಗಳಿಗೆ ಡಿ.27 ರಂದು ಚುನಾವಣೆ ನಡೆಯಲಿದ್ದು, ಕುವೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಓಡಿಲ್ನಾಳ ಗ್ರಾಮದ ವಾರ್ಡ್-1ರ ಸದಸ್ಯ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಲಕ್ಷ್ಮೀಶ ಶೆಟ್ಟಿ ಮೂಡಾಯಿಲು, ಶ್ರೀಮತಿ ಭಾರತಿ ಶೆಟ್ಟಿ ಮುಂಗೇಲು, ಶ್ರೀಮತಿ ಆನಂದಿ ಪಡ್ಡಾಯಿಲು ಹಾಗೂ ವೇದಾವತಿ ಗೋಪಾಲ ಗೌಡ ಕರ್ನಂತೋಡಿ ಇವರುಗಳು ಇಂದು(ಡಿ.15) ಕುವೆಟ್ಟು ಗ್ರಾ.ಪಂ.ನಲ್ಲಿ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ಪ್ರಭಾಕರ್ ಶೆಟ್ಟಿ ಉಪ್ಪಡ್ಕ, ರಾಜ್ಪ್ರಕಾಶ್ ಶೆಟ್ಟಿ ಪಡ್ಡಾಯಿಲು, ಕುವೆಟ್ಟು ಗ್ರಾ.ಪಂ ಮಾಜಿ ಸದಸ್ಯ ರುದೇಶ್ ಕುಮಾರ್, ಓಡಿಲ್ನಾಳ ಶಕ್ತಿಕೇಂದ್ರದ ಅಧ್ಯಕ್ಷ ಕಿಟ್ಟಣ್ಣ ಶೆಟ್ಟಿ ಕೋರ್ಯಾರು, ಕಾರ್ಯದರ್ಶಿ ಹರೀಶ್ ನಾಯ್ಕ ನಾನಾಡಿ, ಬಾಬು ಶೆಟ್ಟಿ ಶೆಟ್ಟಿ ಪಡ್ಡಾಯಿಲು, ಅಣ್ಣಿ ಶೆಟ್ಟಿ ಮೂಡಾಯಿಲು, ಶಿವರಾಮ ಶೆಟ್ಟಿ ಉಪ್ಪಡ್ಕ, ಅರುಣ್ ಸುಮಿತ್ ಡಿ’ಸೋಜ, ಕಿರಣ್ ಶೆಟ್ಟಿ ಮೂಡಾಯಿಲು ಮತ್ತಿತರರು ಉಪಸ್ಥಿತರಿದ್ದರು.