ಆರೋಪಿಗಳಾದ ಜನಾರ್ಧನ ಪೂಜಾರಿ ಬಂಟ್ವಾಳ, ಜನಾರ್ಧನ ಇಳಂತಿಲ ಹಾಗೂ ವೇಶ್ಯಾವಾಟಿಕೆಗೆ ಅನುವು ಮಾಡಿಕೊಟ್ಟ ರಾಮಚಂದ್ರ ದೇವಾಡಿಗ ಪೊಲೀಸ್ ವಶಕ್ಕೆ
ಮೇಲಂತಬೆಟ್ಟು: ಇಲ್ಲಿಯ ಕಲ್ಲಗುಡ್ಡೆ ಎಂಬಲ್ಲಿ ಅಕ್ರಮವಾಗಿ ವೈಶ್ಯವಾಟಿಕೆ ನಡೆಸುತ್ತಿದ್ದ ಕೇಂದ್ರಕ್ಕೆ ಪೊಲೀಸರು ಧಾಳಿ ನಡೆಸಿ ಮೂರು ಮಂದಿ ಆರೋಪಿಗಳನ್ನು ಬಂಧಿಸಿದ ಘಟನೆ ಡಿ.14ರಂದು ವರದಿಯಾಗಿದೆ.
ಮೇಲಂತಬೆಟ್ಟು ಗ್ರಾಮದ ಕಲ್ಲಬೆಟ್ಟು ನಿವಾಸಿ ಜನಾರ್ಧನ ಪೂಜಾರಿ(45), ಜನಾರ್ಧನ(40), ರಾಮಚಂದ್ರ ದೇವಾಡಿಗ (45) ಬಂಧಿತ ಆರೋಪಿಗಳು.
ಘಟನೆ ವಿವರ: ಬೆಳ್ತಂಗಡಿ ತಾಲೂಕು ಮೇಲಂತ ಬೆಟ್ಟು ಗ್ರಾಮದ ಕಲ್ಲಗುಡ್ಡೆ ಎಂಬಲ್ಲಿ ವಾಸ್ತವ್ಯವಿರುವ ರಾಮಚಂದ್ರ ದೇವಾಡಿಗ ಎಂಬವರು ಬಾಡಿಗೆಗೆ ಪಡೆದುಕೊಂಡಿರುವ ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ ಅವರಿಗೆ ಬಂದ ಖಚಿತ ಮಾಹಿತಿಯನ್ವಯ ಪೊಲೀಸ್ ಉಪ ಅಧೀಕ್ಷಕ ಬಂಟ್ವಾಳ ಉಪ ವಿಭಾಗರವರಿಂದ ಅನುಮತಿ /ಸರ್ಚ್ ವಾರಂಟ್ ಪಡೆದು, ಠಾಣಾ ಸಿಬ್ಬಂದಿಗಳ ಜೊತೆಗೆ ಬೆಳಿಗ್ಗೆ10.45 ರ ಸಮಯದಲ್ಲಿ ಸ್ಥಳಕ್ಕೆ ಧಾಳಿ ಧಾಳಿನಡೆಸಿ ವೇಶ್ಯಾವಾಟಿಕೆಯಲ್ಲಿ ನಿರತರಾಗಿದ್ದ ಆರೋಪಿಗಳಾದ ಜನಾರ್ಧನ ಪೂಜಾರಿ, ಜನಾರ್ಧನ, ವೇಶ್ಯಾವಾಟಿಕೆಗೆ ಅನುವು ಮಾಡಿಕೊಟ್ಟ ರಾಮಚಂದ್ರ ದೇವಾಡಿಗ, ವೇಶ್ಯಾವಾಟಿಕೆಯಲ್ಲಿ ನೊಂದ ಮಹಿಳೆಯರಾದ ಶ್ರದ್ಧಾ, ಮತ್ತು ಶಿಲ್ಪಾ ಎಂಬವರನ್ನು ವಶಕ್ಕೆ ಪಡೆದುಕೊಂಡು ಕೇಸು ದಾಖಲಿಸಿಕೊಂಡಿದ್ದಾರೆ. ಈ ಸಂಬಂಧ ತನಿಖೆ ಮುಂದುವರೆದಿದೆ.