ಧಮ೯ಸ್ಥಳದಲ್ಲಿ ಸಾಹಿತ್ಯ ಸಮ್ಮೇಳನದ 88 ನೇ ಅಧಿವೇಶನ ಉದ್ಘಾಟನೆ
ಧಮ೯ಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ದಲ್ಲಿ ಕಾತಿ೯ಕ ಮಾಸದ ಮಂಗಳ ಪವ೯ದಲ್ಲಿ ಭಗವಾನ್ ಶ್ರೀ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವದ ಅಂಗವಾಗಿ ಸಾಹಿತ್ಯ ಸಮ್ಮೇಳನದ ೮೮ ನೇ ಅಧಿವೇಶನ ಡಿ.೧೪ ಇಂದು ಸಂಜೆ ಧಮ೯ಸ್ಥಳದ ಅಮೃತವಷಿ೯ಣಿ ಸಭಾ ಭವನದಲ್ಲಿ ಜರುಗಿತು.
ಸಮ್ಮೇಳನವನ್ನು ಬೆಂಗಳೂರಿನ ಹಿರಿಯ ವಿದ್ವಾಂಸರು ಹಾಗೂ ವಿಶ್ರಾಂತ ಪ್ರಾಧ್ಯಾಪಕರಾದ ವೇದಭೂಷಣ ಡಾ. ಎಸ್ ರಂಗನಾಥ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಬೆಂಗಳೂರಿನ ಹಿರಿಯ ಸಾಹಿತಿ ಹಾಗೂ ಖ್ಯಾತ ವಿಮರ್ಶಕರಾದ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ವಹಿಸಿದ್ದರು.
ಶ್ರೀ ಕ್ಷೇತ್ರ ಧಮ೯ಸ್ಥಳದ ಧಮಾ೯ಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಸ್ವಾಗತಿಸಿ, ಧಮ೯ ಮತ್ತು ಸಾಹಿತ್ಯ ಮಾನವರ ಏಳಿಗೆಗಾಗಿ ಪೂರಕ ಮತ್ತು ಪ್ರೇರಕ. ನಮ್ಮಲ್ಲಿ ಆಚರಿಸುವ ಸವ೯ಧಮ೯ ಮತ್ತು ಸಾಹಿತ್ಯ ಸಮ್ಮೇಳನಗಳ ಉದ್ದೇಶವೂ ಸವ೯ರ ಹಿತ ಹಾಗೂ ಸುಂದರ ಸಮ-ಸಹಬಾಳ್ವೆಯ ಜೊತೆಗೆ ಭಾಷಾ ಸಾಮಾರಸ್ಯ, ಭಾಷಾಭಿಮಾನದ ಜೊತೆ ಜೊತೆಗೆ ಮಾನವೀಯ ಉದ್ದೀಪನ ಆ ಮೂಲಕ ಸ್ವಸ್ಥ ಸಮಾಜದ ನಿಮಾ೯ಣ ಸಾಧ್ಯವಿದೆ ಎಂದರು.
ಮೈಸೂರಿನ ಪ್ರಾಧ್ಯಾಪಕರು ಹಾಗೂ ಸಂಸ್ಕೃತಿ ಚಿಂತಕರಾದ ಡಾ. ಜ್ಯೋತಿ ಶಂಕರ್ ಮತ್ತು ಮೂಡಬಿದ್ರೆ ಇತಿಹಾಸ ಸಂಶೋಧಕರು, ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಪುಂಡಿಕಾ ಗಣಪಯ್ಯ ಭಟ್ ಉಪನ್ಯಾಸ ನೀಡಿದರು
ವೇದಿಕೆಯಲ್ಲಿ ಶ್ರೀಮತಿ ಹೇಮಾವತಿ ವಿ. ಹೆಗ್ಗಡೆ, ಡಿ.ಹಷೇ೯ದ್ರ ಕುಮಾರ್. ಡಿ.ಸುರೇಂದ್ರ ಕುಮಾರ್, ಡಾ.ಯಶೋವಮ೯ ಉಪಸ್ಥಿತರಿದ್ದರು.
ಶ್ರೀ ಧ.ಮಂ. ಮಹಾವಿದ್ಯಾಲಯ ಉಜಿರೆಯ ವಿದ್ಯಾರ್ಥಿಗಳು ಪ್ರಾಥ೯ನೆ ಹಾಡಿದರು. ಮೈತ್ರಿ ನಂದೀಶ್ ಮತ್ತು ಎಸ್.ಡಿ.ಎಂ.ಇ ಸೊಸೈಟಿ ಪ್ರಾಜೆಕ್ಟ್ ಡೈರೆಕ್ಟ್ ರ್ ಡಿ.ಶ್ರೇಯಶ್ ಕುಮಾರ್
ಸನ್ಮಾನ ಪತ್ರ ವಾಚಿಸಿದರು
ಉಪನ್ಯಾಸಕರನ್ನು ಸ್ವಾಗತ ಸಮಿತಿ ಖಾಜಾಂಚಿ ಡಿ. ಹಷೇ೯0 ದ್ರಕುಮಾರ್ ಸನ್ಮಾನಿಸಿದರು. ಉಪನ್ಯಾಸಕ ಡಾ.ಬಿ.ಪಿ ಸಂಪತ್ ಕುಮಾರ್
ಕಾಯ೯ಕ್ರಮ ನಿರೂಪಿಸಿ, ಉಜಿರೆ ರುಡ್ ಸೆಟ್ ನಿದೇ೯ಶಕ ಪಿ.ಸಿ ಹಿರೇಮಠ ವಂದಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ: ರಾತ್ರಿ ನೃತ್ಯ ನಿಕೇತನ ಕೊಡವೂರು ಕಲಾವಿದರು ಉಡುಪಿ ಇವರಿಂದ `ನಾರಸಿಂಹ’ ನೃತ್ಯರೂಪಕ ಜರುಗಿತು.