ಶುದ್ಧ ಹಾಲು ಉತ್ಪಾದನೆ ಮತ್ತು ಹೈನುಗಾರಿಕೆ ಮಾಹಿತಿ ಶಿಬಿರ ಕಾರ್ಯ ಕ್ರಮ
ಕೊಯ್ಯೂರು : ಕೊಯ್ಯೂರು ಹಾಲು ಉತ್ಪಾದಕರ ಸಹಕಾರ ಸಂಘದ 2019-20ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಹಾಗೂ ಶುದ್ಧ ಹಾಲು ಉತ್ಪಾದನೆ ಮತ್ತು ಹೈನುಗಾರಿಕೆ ಮಾಹಿತಿ ಶಿಬಿರ ಕಾರ್ಯಕ್ರಮ ದ.ಕ.ಜಿಲ್ಲಾ ಹಾಲು ಒಕ್ಕೂಟದ ಇದರ ಸಂಯುಕ್ತ ಆಶ್ರಯದಲ್ಲಿ ಡಿ.14 ರಂದು ಸಂಘ ವಠರಾದಲ್ಲಿ ನಡೆಯಿತು.
ಸಭೆಯಲ್ಲಿ ದ.ಕ.ಹಾಲು ಒಕ್ಕೂಟದ ವ್ಯವಸ್ಥಾಪಕ ನಿತ್ಯಾನಂದ ಭಕ್ತ ಭಾಗವಹಿಸಿ ದನಗಳ ಸಾಕಾಣಿಕೆ, ಹೈನುಗಾರಿಕೆಯಲ್ಲಿ ಉತ್ತಮ ಗುಣಮಟ್ಟದ ಹಾಲು ಹಾಗೂ ಹೆಚ್ಚಿನ ಲಾಭ ಪಡೆಯುವ ಬಗ್ಗೆ ಮಾಹಿತಿ ನೀಡಿದರು. ದ.ಕ.ವಿಸ್ತಾರಣಾಧಿಕಾರಿ ಅದಿತ್ಯ ಸಿ.ವಾರ್ಷಿಕ ವರದಿಯನ್ನು ಸಭೆಯಲ್ಲಿ ಮಂಡಿಸಿದರು.
ಸಂಘದ ಅಧ್ಯಕ್ಷ ಕೃಷ್ಣ ಭಟ್ ಕೆ. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,ರಾಜ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ನಮ್ಮ ಸಂಘವು ಪ್ರಶಸ್ತಿಗಳನ್ನು ಪಡೆದಿದೆ. ಗುಣಮಟ್ಟದ ಹಾಲು ನೀಡುವ ಸಂಘದ ಸದಸ್ಯರಿಗೆ ಮತ್ತು ಸಹಕರಿಸಿದ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರಿಗೆ ಕೃತಜ್ಞತೆ ಸಲ್ಲಿಸಿದರು.
ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ದ.ಕ.ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ.ರಾಮಕೃಷ್ಣ ಭಟ್, ಬೆಳ್ತಂಗಡಿ ಪಶು ವೈದ್ಯಾಧಿಕಾರಿ ಗಣಪತಿ, ನಿವೃತ್ತ ಪಶುವೈದ್ಯಾಧಿಕಾರಿ ಡಾ.ದಿನೇಶ್ ಸರಳಾಯ, ಡಾ. ಗಣಪತಿ ಉಪಯುಕ್ತ ಮಾಹಿತಿ ನೀಡಿದರು.
ಸಂಘದ ಉಪಾಧ್ಯಕ್ಷ ಮೋಹನ್ ದಾಸ್ ಗೌಡ ಪಿ, ನಿರ್ದೇಶಕರುಗಳಾದ ದಿನೇಶ್ ಗೌಡ, ಜೆ.ವೆಂಕಪ್ಪ ಗೌಡ ,ಗೋಪಾಲಕೃಷ್ಣ ಗೌಡ, ಚಂದ್ರಶೇಖರ ಗೌಡ, ಉಮೇಶ್, ಅನಿಲ್ ಕುಮಾರ್, ಎನ್.ರಾಜು , ಮೋಹಿನಿ ಟಿ., ವನಿತಾ ಹಾಗೂ ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು
ಸಂಘವು ಸದ್ರಿ ಸಾಲಿನಲ್ಲಿ 5,87,572.35 ರೂ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ರೂ. 20,80,713 ಬೋನಸ್, ಶೇ.10 ಡಿವಿಡೆಂಟ್ ನೀಡುವುದಾಗಿ ತೀರ್ಮಾನಿಸಲಾಯಿತು.
ಅತೀ ಹೆಚ್ಚು ಹಾಲು ಹಾಕಿದ ಸದಸ್ಯರಾದ ಮೋಹನ್, ಭದ್ರಪ್ಪ ಗೌಡ ಮತ್ತು ಗುಣಮಟ್ಟದ ಹಾಲು ಪೂರೈಸಿದ ಹೊನ್ನಪ್ಪ ಗೌಡ, ಭೋಜರಾಜ ಅವರಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಪ್ರತಿಭಾ ಪುರಸ್ಕಾರ : ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉನ್ನತ ಸಾಧನೆ ಮಾಡಿದ ಸಂಘದ ಸದಸ್ಯರ ಮಕ್ಕಳಾದ ರಾಜ್ಯದಲ್ಲಿ 4 ನೇ ಸ್ಥಾನ ಪಡೆದ ಕು| ಶೈವಿ ಹಾಗೂ ಕೊಯ್ಯೂರು ಪ್ರೌಢ ಶಾಲೆಯಲ್ಲಿ ದ್ವೀತಿಯ ಸ್ಥಾನ ಪಡೆದ ಕು| ಅಶ್ವಿನಿ ಮತ್ತು ಕ್ರೀಡಾ ಸಾಧಕಿ, ಉಜಿರೆ ಎಸ್.ಡಿ.ಎಮ್.ಕಾಲೇಜು ವಿದ್ಯಾರ್ಥಿ ಕು| ಮನ್ಸಿದಾ ಬಾನು ರವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕೊಯ್ಯೂರು ಸರಕಾರಿ ಪದವಿ ಪೂರ್ವ ಕಾಲೇಜಿಗೆ ಕಬ್ಬಿಣದ ಕಪಾಟು, ಸಂಘದ ಸದಸ್ಯರಾದ ಡೊಂಬಯ್ಯ ಗೌಡ ಮತ್ತು ಬೇಬಿ ಯವರಿಗೆ ವೈದ್ಯಕೀಯ ಧನಸಹಾಯ ನೀಡಲಾಯಿತು.
ಸಂಘದ ಕಾರ್ಯದರ್ಶಿ ಶಿಲ್ಪಾ ಡಿ.ಪೂಜಾರಿ ವಾರ್ಷಿಕ ವರದಿ ವಾಚಿಸಿದರು. ಸಂಘದ ಸಿಬ್ಬಂದಿಗಳಾದ ಹಾಲು ಪರೀಕ್ಷಕಿ ಶಶಿಕಲಾ, ಗುಮಾಸ್ತೆ ವೇದಾವತಿ ಮತ್ತು ಕೃ.ಗ.ಕಾರ್ಯಕರ್ತ ಬೊಮ್ಮ ಗೌಡ ಉಪಸ್ಥಿತರಿದ್ದು ಸಹಕರಿಸಿದರು. ಸಂಘದ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು. ಸಂಘದ ಸಿಬ್ಬಂದಿ ಬಿ.ಎಮ್. ಸಿ.ನಿರ್ವಾಹಕ ನಾರಾಯಣ ಪ್ರಾರ್ಥಿಸಿ. ನಿರ್ದೇಶಕ ದಿನೇಶ್ ಗೌಡ ಸ್ವಾಗತಿಸಿ, ಕಾರ್ಯದರ್ಶಿ ಶಿಲ್ಪಾ ಡಿ. ಧನ್ಯವಾದವಿತ್ತರು.