ಮಚ್ಚಿನ: ರೋಟರಿ ಕ್ಲಬ್ ಮಡಂತ್ಯಾರು, ನ್ಯೂ ಪ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ಬ್ ಬಳ್ಳಮಂಜ, ಅನಂತೇಶ್ವರ ಸ್ವಾಮಿ ಭಜನಾ ಮಂಡಳಿ ಬಳ್ಳಮಂಜ, ವಿದ್ಯಾ ಸಾಗರ ಆಂಗ್ಲ ಮಾಧ್ಯಮ ಶಾಲೆ ಮಚ್ಚಿನ ಇವರುಗಳ ಸಹಭಾಗಿತ್ವದಲ್ಲಿ ಸಂಗೀತ ತರಬೇತಿ ಕೇಂದ್ರದ ಉದ್ಘಾಟನಾ ಸಮಾರಂಭ ಡಿ.11 ರಂದು ಜರುಗಿತು.
ಖ್ಯಾತ ಯಕ್ಷಗಾನ ಭಾಗವತರದ ಕಾವ್ಯ ಶ್ರೀ ಅಜೇರು ದೀಪ ಬೆಳಗಿಸಿ ಉದ್ಘಾಟಿಸಿ, ಶುಭ ಹಾರೈಸಿದರು.ಮಡಂತ್ಯಾರು ರೋಟರಿ ಕ್ಲಬ್ ಅಧ್ಯಕ್ಷ ಜಯಂತ್ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮಚ್ಚಿನ ವಿದ್ಯಾ ಸಾಗರ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ಆರ್. ವೆಂಕಟ್ ರೆಡ್ಡಿ, ಸಂಗೀತ ಗುರು ವಿಶ್ವನಾಥ ಆಚಾರ್ಯ ಕಡಬ, ರೊ| ರಾಮ್ ಭಟ್ ಉಪಸ್ಥಿತರಿದ್ದರು.
ರೊ| ಹರ್ಷ ನಾರಾಯಣ ಶೆಟ್ಟಿ ಸ್ವಾಗತಿಸಿ, ರೋಟರಿ ಕ್ಲಬ್ ಕಾರ್ಯದರ್ಶಿ ರಾಜೇಶ್ ಕೃಷ್ಣಪ್ಪ ಕಾರ್ಯಕ್ರಮ ನಿರೂಪಿಸಿದರು.