ಮರೋಡಿ ದೇವಸ್ಥಾನದಲ್ಲಿ ಶನೈಶ್ವರ ಪೂಜೆ


ಬೆಳ್ತಂಗಡಿ: ಮರೋಡಿ ಶ್ರೀ ಉಮಾಮಹೇಶ್ವರ ಯಂಗ್‌ ಸ್ಟಾರ್‌ ಫ್ರೆಂಡ್ಸ್ ಇದರ ವತಿಯಿಂದ 7ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ವರ ಪೂಜೆಯು ಶನಿವಾರ ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯಿತು.


ಸಂಜೆ ಕಲಶ ಪತ್ರಿಷ್ಠೆ, ರಾತ್ರಿ ಉಮಾಮಹೇಶ್ವರ ದೇವರಿಗೆ ರಂಗಪೂಜೆ, ಬಳಿಕ ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಶ್ರೀಪತಿ ಭಟ್‌ ಮತ್ತು ಸುಬ್ರಹ್ಮಣ್ಯ ಪ್ರಸಾದ್ ಭಟ್‌ ಪೌರೋಹಿತ್ಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.


ದೇವಸ್ಥಾನದ ಆಡಳಿತ ಮಂಡಳಿ ಕಾರ್ಯದರ್ಶಿ ಜಯಂತ ಕೋಟ್ಯಾನ್‌, ಮೊಕ್ತೇಸರರಾದ ರತ್ನಾಕರ ಬಣ್ಣಾನ್‌, ವಿಜಯ ಆರಿಗ, ಅಣ್ಣಪ್ಪ ಹೆಗ್ಡೆ, ಉಮಾಮಹೇಶ್ವರ ಯಂಗ್‌ ಸ್ಟಾರ್‌ ಫ್ರೆಂಡ್ಸ್‌ನ ಗೌರವಾಧ್ಯಕ್ಷ ಯಶೋಧರ ಬಂಗೇರ, ಅಧ್ಯಕ್ಷ ವಿದ್ಯಾನಂದ ಪೂಜಾರಿ, ಕಾರ್ಯದರ್ಶಿ ಸುಜಿತ್‌ ಹೆಗ್ಡೆ, ಕೋಶಾಧಿಕಾರಿ ಗಣೇಶ್‌ ಪೂಜಾರಿ, ಗೌರವ ಸಲಹೆಗಾರರಾದ ಶುಭರಾಜ ಹೆಗ್ಡೆ, ಹರೀಶ್‌ ಪೂಜಾರಿ, ಸಂಘಟನೆಯ ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು.

   

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.